ವೈರಸ್ ಸೋಂಕಿಗೆ ಒಳಗಾದ ಇಂಗ್ಲೆಂಡ್ ಆಟಗಾರರು: ಪಾಕ್ ವಿರುದ್ಧದ ಮೊದಲ ಟೆಸ್ಟ್ ಮುಂದೂಡಿಕೆ ಸಾಧ್ಯತೆ

ಕರಾಚಿ, ನ.30: ನಾಯಕ ಬೆನ್ ಸ್ಟೋಕ್ಸ್ ಸಹಿತ ಇಂಗ್ಲೆಂಡ್‌ನ ಹಲವು ಆಟಗಾರರು ವೈರಲ್ ಸೋಂಕಿಗೆ ಒಳಗಾಗಿದ್ದು, ಡಿ.1ರಂದು ನಿಗದಿಯಾಗಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯವು ಮುಂದೂಡಿಕೆಯಾಗುವ ಸಾಧ್ಯತೆಯಿದೆ.
ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್‌ಮಂಡಳಿ(ಇಸಿಬಿ)ಯೊಂದಿಗೆ ಮುಂದಿನ ಹೆಜ್ಜೆಯ ಕುರಿತು ಚರ್ಚೆ ನಡೆಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬುಧವಾರ ತಿಳಿಸಿದೆ.
ಇಂಗ್ಲೆಂಡ್‌ನ ಕೆಲವು ಆಟಗಾರರು ವೈರಸ್ ಸೋಂಕಿಗೆ ಒಳಗಾಗಿದ್ದು, ಪಾಕ್-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭದ ಕುರಿತಂತೆ ಪಿಸಿಬಿ ಹಾಗೂ ಇಸಿಬಿ ಚರ್ಚಿಸಲಿವೆ ಎಂದು ಮಂಡಳಿಯು ಟ್ವಿಟರ್‌ನಲ್ಲಿ ತಿಳಿಸಿದೆ.
Next Story