ಉಳ್ಳಾಲ: ಮದನಿ ವಿದ್ಯಾಸಂಸ್ಥೆಯ ಕ್ರೀಡೋತ್ಸವ

ಮಂಗಳೂರು, ಡಿ.1: ಅಳೇಕಲ ಮದನಿ ಪದವಿ ಪೂರ್ವ ಕಾಲೇಜು, ಮದನಿ ಪ್ರೌಢಶಾಲೆ, ಮದನಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡೋತ್ಸವ ಗುರುವಾರ ನಡೆಯಿತು.
ಅಳೇಕಲ ಮದನಿ ಎಜುಕೇಶನ್ ಕೋಶಾಧಿಕಾರಿ ಹಾಜಿ ಯು.ಪಿ.ಅರಬಿ ಧ್ವಜಾರೋಣಗೈದರು. ಅಳೇಕಲ ಮದನಿ ಶಿಕ್ಷಣ ಸಂಸ್ಥೆಯ ಸಂಚಾಲಕ ಹಾಜಿ ಯು.ಕೆ. ಇಬ್ರಾಹೀಂ ಕಕ್ಕೆತೋಟ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಅಳೇಕಲ ಮದನಿ ಕಾಲೇಜಿನ ಪ್ರಾಂಶುಪಾಲ ಟಿ.ಇಸ್ಮಾಯಿಲ್ ಕ್ರೀಡಾ ಪಥ ಸಂಚಲನದ ವಂದನೆ ಸ್ವೀಕರಿಸಿ ಮಾತನಾಡಿದರು. ಮದನಿ ಎಜುಕೇಶನ್ ಅಸೋಸಿಯೇಶನ್ ಉಪಾಧ್ಯಕ್ಷ ಹಾಜಿ ಯು.ಎಸ್. ಅಬೂಬಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮದನಿ ಎಜುಕೇಶನ್ ಅಸೋಸಿಯೇಶನ್ ಲೆಕ್ಕ ಪರಿಶೋಧಕ ಇಬ್ರಾಹೀಂ ಆಲಿಯಬ್ಬ, ಕಾರ್ಯದರ್ಶಿ ಅಬ್ದುಲ್ ಫತಾಕ್, ಉಳ್ಳಾಲ ನಗರ ಸಭೆಯ ಸದಸ್ಯ ಯು.ಎ. ಇಸ್ಮಾಯಿಲ್, ಮದನಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಆಯುಶಾ ಬಾನು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಉಮಾವತಿ ಉಪಸ್ಥಿತರಿದ್ದರು.
ಮದನಿ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ಮುಹಮ್ಮದ್ ಅಶ್ರಫ್ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಮುಹಮ್ಮದ್ ಜಾವೀದ್ ಸೈಮನ್ ಕ್ರೀಡಾ ಪ್ರತಿಜ್ಞೆ ಭೋದಿಸಿದರು. ಮದನಿ ಎಜುಕೇಶನ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ವಂದಿಸಿದರು. ಉಪನ್ಯಾಸಕ ಹಬೀಬ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.