ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಧನಸಹಾಯ

ಮಂಗಳೂರು, ಡಿ.1: ಮುಕ್ಕ ನಿವಾಸಿಗಳಾದ ಅನಾರೋಗ್ಯ ಪೀಡಿತ ಮುಹಮ್ಮದ್ ಹಾಗೂ ಪಾತುಂಞಿ ಅವರ ನಿವಾಸಕ್ಕೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಭೇಟಿ ನೀಡಿ ಧನ ಸಹಾಯ ನೀಡಿದರು. ವೈದ್ಯಕೀಯ ವೆಚ್ಚಕ್ಕಾಗಿ ಮಾಸಿಕ ಒಂದು ಸಾವಿರ ರೂಪಾಯಿಯನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಕೆ. ಅಶ್ರಫ್, ಸೈಯದ್ ಅಹ್ಮದ್ ಬಾಷ ತಂಙಳ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಸಿ.ಎಂ. ಹನೀಫ್, ಹಾಜಿ ರಿಯಾಝುದ್ಧೀನ್, ಎಂ.ಎ. ಅಶ್ರಫ್, ಮೊಯ್ದಿನ್ ಮೋನು ಉಪಸ್ಥಿತರಿದ್ದರು.
Next Story