ಡಿ.2: ಬಿ.ಸಿ.ರೋಡ್‌ನಲ್ಲಿ ಸೀರತ್ ಸಮಾವೇಶ

ಮಂಗಳೂರು, ಡಿ.1: ಯುನಿವೆಫ್ ಕರ್ನಾಟಕದ ‘ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಡಿ.2ರ ಸಂಜೆ 6:45ಕ್ಕೆ ಬಿ.ಸಿ. ರೋಡ್ ಕೈಕಂಬದ ಪೂಂಜಾ ಗ್ರೌಂಡ್‌ನಲ್ಲಿ ಸೀರತ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಶರೀಫ್, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಜಿ. ಮುಹಮ್ಮದ್ ಹನೀಫ್ ಮತ್ತು ಮುಸ್ಲಿಮ್ ಜಸ್ಟಿಸ್ ಫೋರಂ ಮಂಗಳೂರು ಇದರ ವಕ್ತಾರ ಮುಹಮ್ಮದ್ ಹನೀಫ್ ಖಾನ್ ಕೊಡಾಜೆ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story