ಜಿಎನ್ ಸಾಯಿಬಾಬಾ ಬಿಡುಗಡೆಗಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ: ಆರೋಪ

ಹೊಸದಿಲ್ಲಿ: ಡಾ. ಜಿಎನ್ ಸಾಯಿಬಾಬಾ (GN Saibaba) ಮತ್ತು ಇತರ ನಾಲ್ವರ ಬಿಡುಗಡೆಗಾಗಿ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು (DU students) ಗುರುವಾರ ಪ್ರತಿಭಟನೆ ನಡೆಸಿದ್ದು, ಈ ವೇಳೆ ಎಬಿವಿಪಿ (ABVP) ಸದಸ್ಯರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, 40-50 ಜನರ ಗುಂಪು ಆಸ್ಪತ್ರೆಯನ್ನು ಸುತ್ತುವರೆದು ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
“ನಾವು ಜಿಎನ್ ಸಾಯಿಬಾಬಾ ಅವರ ಅನ್ಯಾಯದ ಸೆರೆವಾಸದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ನಡೆಸುತ್ತಿದ್ದೆವು. 40-50 ಎಬಿವಿಪಿ ವಿದ್ಯಾರ್ಥಿಗಳು ನಮ್ಮ ಮೇಲೆ ಲಾಠಿ ಮೂಲಕ ದಾಳಿ ನಡೆಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ” ಎಂದು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಮತ್ತು ಭಗತ್ ಸಿಂಗ್ ಛತ್ರ ಏಕತಾ ಮಂಚ್‌ನ ಅಧ್ಯಕ್ಷ ರವೀಂದರ್ ಸಿಂಗ್ ಹೇಳಿದ್ದಾರೆ.
"ನನ್ನ ಸ್ನೇಹಿತನೊಬ್ಬನಿಗೆ ಇಟ್ಟಿಗೆಯಿಂದ ಹೊಡೆದಿದ್ದಾರೆ" ಎಂದು ಸಿಯಾಸಟ್ ಮಾಧ್ಯಮದೊಂದಿಗೆ ಇನ್ನೊಬ್ಬ ಪ್ರತಿಭಟನಾಕಾರ ರಾಜ್‌ವೀರ್ ಹೇಳಿದ್ದಾರೆ.
“ನಾವು ಆಸ್ಪತ್ರೆಯಿಂದ ಹೊರಬಂದರೆ ಅವರು ಮತ್ತೆ ನಮ್ಮ ಮೇಲೆ ದಾಳಿ ಮಾಡುತ್ತಾರೆ ಎಂದು ಅವರು ಹೇಳಿದರು. ಈ ಬೆದರಿಕೆಯನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ”ಎಂದು ಪ್ರತಿಭಟನಾಕಾರರಲ್ಲೊಬ್ಬರಾದ ಕಾನೂನು ಪದವೀಧರ ಎಹ್ತ್ಮಾಮ್ ಹೇಳಿದರು.
ABVP has brutalised multiple students in DU today. The students were campaigning for a talk that is to be held. The students are currently in The Hindu Rao hospital. Students are bleeding badly and there are hoards of ABVP people outside still waiting to escalate violence.
— Shivangi (@sheevaangii) December 1, 2022







