ಕಾಲಮಿತಿ ಯಕ್ಷಗಾನಕ್ಕೆ ವಿಶೇಷ ಅನುಮತಿ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್

ಮಂಗಳೂರು, ಡಿ.2: ಯಕ್ಷಗಾನ ಕಾಲಮಿತಿಯನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಿ ವಿಶೇಷ ಅನುಮತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಾಲಮಿತಿಗೆ ಸಂಬಂಧಿಸಿ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿ ರಾತ್ರಿ 10 ಗಂಟೆಯ ಬಳಿಕ ಕರ್ಕಶ ಶಬ್ದಕ್ಕೆಆದೇಶ ಇಲ್ಲ ಎಂದು ಹೇಳಿದೆ. ಈ ಆದೇಶ ಪಾಲಿಸುವಂತೆ ರಾಜ್ಯ ಸರಕಾರವೂ ಸೂಚನೆ ನೀಡಿದೆ. ಆದರೆ ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ವತಿಯಿಂದ ನಡೆಯುವ ಪುರಾತನ, ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಬೆಳಗ್ಗಿನವರೆಗೆ ನಡೆಸಲು ಅನುಮತಿ ಕೋರಲಾಗಿದೆ. ಈ ಬಗ್ಗೆ ಸಭೆ ನಡೆಸಿ ಯಕ್ಷಗಾನ ಕಾಲಮಿತಿಯನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಿ ವಿಶೇಷ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು.
ದೈವ ಕಲೆಗೆ ಸಂಬಂಧಿಸಿ ಅಂತಹ ಯಾವುದೇ ಅರ್ಜಿ ಬಂದಿಲ್ಲ. ಬಂದಾಗ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರತಿಕ್ರಿಯಿಸಿದರು.