ದುಬೈ, ಕುವೈತ್ ನಲ್ಲಿ ಉದ್ಯೋಗ: ಅರ್ಜಿ ಆಹ್ವಾನ

ಮಂಗಳೂರು, ಡಿ.2: ದುಬೈ ಮತ್ತು ಕುವೈತ್ ದೇಶಗಳಲ್ಲಿ ಮನೆ ಕೆಲಸ ನಿರ್ವಹಿಸಲು 800 ಮಂದಿ ಮಹಿಳಾ ಕೆಲಸಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು 30-45 ವಯೋಮಿತಿಯಲ್ಲಿರಬೇಕು. ಪಾಸ್‌ಪೋರ್ಟ್ ಹೊಂದಿರಬೇಕು. ಟಿಕೆಟ್ ಮತ್ತು ವೀಸಾ ವೆಚ್ಚವನ್ನು ವಿದೇಶಿ ನಿಯೋಜಕರು ಭರಿಸಲಿದ್ದು, ಎರಡು ವರ್ಷಗಳ ಸೇವಾವಧಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಉರ್ವ ಮಾರುಕಟ್ಟೆಯ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜಕರನ್ನು (ಮೊ.ಸಂ: 9110248485) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story