ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕೇತ್ರದ ವಾರ್ಷಿಕ ಮಹೋತ್ಸವ

ಕೊಣಾಜೆ: ಸಂತ ಜೋಸೆಫ್ ವಾಜ್ ಪುಣ್ಯಾಕ್ಷೇತ್ರ ಮುಡಿಪು ಇದರ ವಾರ್ಷಿಕ ಮಹೋತ್ಸವ- 2022 ಆರಂಭಗೊಂಡಿದ್ದು, ಶುಕ್ರವಾರ ಹಬ್ಬದ ಮಹಾಬಲಿಪೂಜೆ ನೆರವೇರಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪೆರ್ಮನ್ನೂರು ಚರ್ಚ್ ಧರ್ಮಗುರುಗಳಾದ ವಂದನೀಯ ಫಾ. ಸಿಪ್ರಿಯನ್ ಪಿಂಟೊ, ಮುಡಿಪು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ ಫಾ ಅಸ್ಸಿಸಿ ರೆಬೆಲ್ಲೊ , ಒಮ್ಜೂರ್ ಚರ್ಚ್ ಧರ್ಮ ಗುರುಗಳಾದ ವಂ ಫಾ ಅಲ್ವಿನ್ ಡಿಕುನ್ಹಾ, ಮುಡಿಪು ಚರ್ಚ್ ಸಹಾಯಕ ಧರ್ಮಗುರುಗಳಾದ ವಂ ಫಾ ರೊನಾಲ್ಡ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು. ಸಾವಿರಾರು ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು. ವಾರ್ಷಿಕ ಹಬ್ಬವು ರವಿವಾರದ ವರೆಗೆ ನಡೆಯಲಿದೆ.
Next Story