ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿ ರವಿಶಂಕರ್ ಮಿಜಾರು ನೇಮಕ

ಮಂಗಳೂರು, ಡಿ.3: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷರಾಗಿ ರವಿಶಂಕರ್ ಮಿಜಾರು ಅವರನ್ನು ಪುನಃ ನೇಮಕ ಮಾಡಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಕಳೆದ ಹಲವು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ರವಿಶಂಕರ್ ಮಿಜಾರು 2020ರ ಜೂ.4ರಂದು ಮುಡಾ ಅಧ್ಯಕ್ಷರಾಗಿ ನೇಮಕವಾಗಿದ್ದರು. 2022ರ ಜು.20ರಂದು ರಾಜ್ಯ ಸರಕಾರ ಎಲ್ಲ ಪ್ರಾಧಿಕಾರದ ಅಧ್ಯಕ್ಷರ ಅಧಿಕಾರಾವಧಿಯನ್ನು ಮೊಟಕುಗೊಳಿಸಿದ ಕಾರಣ ಮುಡಾ ಅಧ್ಯಕ್ಷತೆ ಖಾಲಿಯಾಗಿತ್ತು. ಇದೀಗ ರಾಜ್ಯ ಸರಕಾರ ರವಿಶಂಕರ್ ಮಿಜಾರು ಪುನಃ ನೇಮಕಗೊಳಿಸಿ ಆದೇಶಿಸಿದೆ
Next Story