ಕಾರ್ಕಳ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳ್ಳತನ
ಕಾರ್ಕಳ, ಡಿ.4: ತಾಲೂಕಿನ ಕಲ್ಯಾ ಗ್ರಾಮದ ಕಂಗಿತ್ಲು ಎಂಬಲ್ಲಿರುವ ಉಷಾ ಎಂಬವರ ಮನೆಯಲ್ಲಿ ಶನಿವಾರ ರಾತ್ರಿ 8:30ರಿಂದ 10 ಗಂಟೆ ನಡುವೆ ಯಾರೂ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಒಡವೆ ಕಳವು ಮಾಡಿಕೊಂಡು ಹೋಗಿದ್ದಾರೆ.
ಮನೆಯ ಅಡುಗೆ ಮನೆಯ ಬಾಗಿಲಿನ ಬೀಗವನ್ನು ಆಯುಧದಿಂದ ಮುರಿದು ಮನೆ ಒಳಗಡೆ ಬಂದ ದುಷ್ಕರ್ಮಿಗಳು ಕೊಠಡಿಯಲ್ಲಿದ್ದ ಗೋದ್ರೆಜ್ನಲ್ಲಿ ಪರ್ಸ್ ಹಾಗೂ ಸ್ಟೀಲಿನ ಡಬ್ಬದಲ್ಲಿರಿಸಿದ್ದ ಸುಮಾರು 4.50,000 ರೂ. ಮೌಲ್ಯದ 156ಗ್ರಾಂ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡಡು ಹೋಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story