ಭಾರತ್ ಜೋಡೊ ಯಾತ್ರೆಯ ಬಳಿಕ ‘ಕೈ ಕೈ ಜೋಡಿಸಿ ಅಭಿಯಾನ’: ಕಾಂಗ್ರೆಸ್

ಹೊಸದಿಲ್ಲಿ: ಭಾರತ್ ಜೋಡೊ ಯಾತ್ರೆ Bharat Jodo Yatra ಅಂತ್ಯಗೊಂಡ ಬಳಿಕ ಜನವರಿ 26ರಿಂದ ಎರಡು ತಿಂಗಳುಗಳ ಕಾಲ ರಾಷ್ಟ್ರವ್ಯಾಪಿ ‘ಕೈ ಕೈ ಜೋಡಿಸಿ ಅಭಿಯಾನ’ ನಡೆಸಲಾಗುವುದು ಎಂದು ಕಾಂಗ್ರೆಸ್ congress ರವಿವಾರ ಘೋಷಿಸಿದೆ. ಈ ಅಭಿಯಾನವನ್ನು ಮೂರು ಹಂತದಲ್ಲಿ ಆಯೋಜಿಸಲಾಗುವುದು.
ದೇಶಾದ್ಯಂತ ಬ್ಲಾಕ್ ಮಟ್ಟದಲ್ಲಿ ಪಾದಯಾತ್ರೆ, ಜಿಲ್ಲಾ ಮಟ್ಟದಲ್ಲಿ ಅಧಿವೇಶನ ಹಾಗೂ ರಾಜ್ಯ ಮಟ್ಟದಲ್ಲಿ ರ್ಯಾಲಿ ನಡೆಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ Jairam Ramesh ಅವರು ತಿಳಿಸಿದ್ದಾರೆ.
Next Story