Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ5 Dec 2022 12:05 AM IST
share
ಓ ಮೆಣಸೇ...

ಸಾಹಿತಿ ಎಸ್.ಎಲ್.ಭೈರಪ್ಪ ಒಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಕೊಟ್ಟರೆ ಅವರು ಸುಮ್ಮನಾಗುತ್ತಾರೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಆ ಬೈರಪ್ಪ ಸುಮ್ಮನಿದ್ದು ಬಿಟ್ಟರೆ ಆತ ಅಜ್ಞಾನ ಪೀಠದ ಹೊರತು ಬೇರಾವುದಕ್ಕೂ ಯೋಗ್ಯನಲ್ಲ ಎಂಬುದು ಜನರಿಗೆ ನಿತ್ಯ ಮನವರಿಕೆಯಾಗುವುದು ಹೇಗೆ?

ಆರೆಸ್ಸೆಸ್ ಕೃಪಾಪೋಷಿತ ಬಿಜೆಪಿ ಆಡಳಿತದಿಂದ ದೇಶ 'ಕಾನೂನುರಹಿತ ಆಡಳಿತ'ದ ದುಸ್ಥಿತಿಗೆ ತಲುಪಿದೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸ್ವತಃ ಆರೆಸ್ಸೆಸ್ ಬಹುಕಾಲ ಕಾಂಗ್ರೆಸ್ ಕೃಪಾ ಪೋಷಿತವಾಗಿತ್ತೆಂಬ ಇತಿಹಾಸ ನೆನಪಿರಲಿ.

ಕೇಂದ್ರ ಸರಕಾರಕ್ಕೆ ಸೇರಿದ 15 ವರ್ಷದಷ್ಟು ಹಳೆಯದಾದ ಎಲ್ಲ ವಾಹನಗಳನ್ನು ಗುಜರಿಗೆ ಹಾಕಲಾಗುವುದು - ನಿತಿನ್ ಗಡ್ಕರಿ, ಕೇಂದ್ರ ಸಚಿವ
60 ವರ್ಷ ಮೀರಿದ ಫುಡಾರಿಗಳಿಗೂ ಈ ನಿಯಮವನ್ನು ವಿಸ್ತರಿಸಿದರೆ ಹೇಗೆ?

ಒಂದು ಭಾಷೆ, ಒಂದು ದೇಶ ಎನ್ನುವ ಬಿಜೆಪಿಯವರಿಗೆ ಬೆಳಗಾವಿ ಎಲ್ಲಿದ್ದರೇನು? - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅವರ ಜೊತೆ ಕೈ ಮಿಲಾಯಿಸಲು ಸಂದರ್ಭ ಕಾಯುತ್ತಿರುವ ನಿಮಗೆ ಅವರು ಯಾವ ನಿಲುವು ತಾಳಿದರೇನಂತೆ?

ಸುರತ್ಕಲ್ ಟೋಲ್ ಗೇಟಿಗೂ ಹೆಜಮಾಡಿ ಟೋಲ್‌ಗೇಟ್‌ಗೂ ಯಾವುದೇ ಸಂಬಂಧ ಇಲ್ಲ - ರಘುಪತಿ ಭಟ್, ಶಾಸಕ
ಬಿಜೆಪಿ ಮತ್ತು ಬಜರಂಗದಳದಂತೆ?

ಗಡಿ ಗಲಾಟೆಯಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾಗುತ್ತದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಕೋಮು ಗಲಾಟೆಯಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದನ್ನೂ ಹೇಳಿ ಬಿಡಿ.

ಮುಸ್ಲಿಮರಿಗೆ ತುಪ್ಪವನ್ನು ನೆಕ್ಕಲು ಅಲ್ಲ ಮೂಸಲು ಕೂಡಾ ಬಿಡುವುದಿಲ್ಲ - ಸಿ.ಟಿ.ರವಿ, ಶಾಸಕ
ನಿಮ್ಮಂತಹ ಮಲಮೂತ್ರ ಭಕ್ಷಕರು ಮುಟ್ಟಿದ ತುಪ್ಪವನ್ನು ನೋಡಲು ಕೂಡಾ ಯಾರೂ ತಯಾರಿಲ್ಲ.

ಶ್ರವಣ ದೋಷಮುಕ್ತ ಕರ್ನಾಟಕಕ್ಕೆ ಬದ್ಧ -ಡಾ.ಸುಧಾಕರ್, ಸಚಿವ
ಮೊದಲು ನಿಮ್ಮ ಸರಕಾರದಲ್ಲಿ, ನೊಂದವರ ಆಕ್ರಂದನ ಕೇಳಬಲ್ಲ ಸಾಮರ್ಥ್ಯ ಬೆಳೆಸಿಕೊಳ್ಳಿ.

ಯಾರು ಜನಸಂಖ್ಯಾ ನಿಯಂತ್ರಣ ನೀತಿ ಪಾಲಿಸುವುದಿಲ್ಲವೋ ಅವರಿಗೆ ಸರಕಾರಿ ಸವಲತ್ತು ಮತ್ತು ಮತದಾನದ ಹಕ್ಕು ನೀಡಬಾರದು - ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ದೇಶದ ಸಂವಿಧಾನವನ್ನೇ ಒಪ್ಪದ ನಿಮ್ಮಂಥವರನ್ನು ಎಲ್ಲಿಡಬೇಕೆಂದು ಮೊದಲು ತೀರ್ಮಾನಿಸಿ.

ಮುಂದಿನ ಬಾರಿ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗುತ್ತಾರೆ. ಒಂದು ವೇಳೆ ಆಗದಿದ್ದರೆ ತಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನೀವು ಹೀಗೆಲ್ಲ ಹೇಳಿದರೆ, ನೀವು ನಿವೃತ್ತರಾಗುವುದನ್ನು ಕಾಣುವುದಕ್ಕಾಗಿಯೇ ಜನ ಕುಮಾರಸ್ವಾಮಿಯನ್ನು ದೂರವಿಡುತ್ತಾರೆ.

ಹಿಂದೂಗಳ ಸಂಕೇತ ಬಳಸಿ ಉಗ್ರ ಕೃತ್ಯ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಗೋಡ್ಸೆಯ ಕಾಲದಿಂದ ನಡೆದು ಬಂದಿರುವ ದೀರ್ಘ ಪರಂಪರೆ ಅದು.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲೆಟ್ ಕಾಂಗ್ರೆಸ್‌ನ ಆಸ್ತಿ ಇದ್ದಂತೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಅವರ ಪರಸ್ಪರ ಜಗಳವನ್ನು ಬಿಜೆಪಿಯವರು ತಮ್ಮ ಅತಿದೊಡ್ಡ ಆಸ್ತಿ ಎಂದು ಪರಿಗಣಿಸಿದ್ದಾರೆ.

ದೇಶದ ಪ್ರತಿಯೊಬ್ಬರನ್ನೂಒಂದು ಎಂದು ಪರಿಗಣಿಸುವುದು ನಮ್ಮ ಕನಸು - ಮೋಹನ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಇಂತಹ ಸದ್ವಿಚಾರಗಳನ್ನು ನೀವು ಕನಸಿಗೆ ಮಾತ್ರ ಸೀಮಿತವಾಗಿಡುವುದೇಕೆ?

ನಡಾಫ್‌ಲಿಪಿಡ್ 'ಕಾಶ್ಮೀರ ಫೈಲ್ಸ್' ಚಿತ್ರವನ್ನು ಅಪಪ್ರಚಾರ, ಅಸಭ್ಯ ಎಂದು ಕರೆದಿರುವುದು ನಾಚಿಕೆ ಗೇಡಿನ ಸಂಗತಿ. ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ - ಅನುಪಮ್ ಖೇರ್, ನಟ
ದೇವರು ಅವರಿಗೆ ಇನ್ನಷ್ಟು ಒಳ್ಳೆಯ ಬುದ್ಧಿ ನೀಡಿದರೆ ಅವರು ಆ ಸಿನೆಮಾವನ್ನು ಇನ್ನಷ್ಟು ಉಗ್ರವಾಗಿ ಖಂಡಿಸುತ್ತಾರೆ.

ಮಹಿಳೆಯರು ಉಡುಪು ಧರಿಸಿದರೆ ಚಂದ, ಧರಿಸದಿದ್ದರೆ ಇನ್ನೂ ಚಂದ - ಬಾಬಾ ರಾಮ್‌ದೇವ್, ಯೋಗ ಗುರು
ನಿಮ್ಮಂತಹ ವಂಚಕರು ಬಾಯಿ ಮುಚ್ಚಿಕೊಂಡಿದ್ದರೆ ಚಂದ, ಜೈಲಲ್ಲಿದ್ದರೆ ಇನ್ನೂ ಚಂದ.

ನಮ್ಮೆಲ್ಲರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಿರ್ಭೀತಿಯಿಂದ ಓಡಾಡಲು ಧೈರ್ಯ ಬಂದಿದ್ದರೆ ಅದಕ್ಕೆ ಕಾರಣ ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ - ಯು.ಟಿ.ಖಾದರ್, ಮಾಜಿ ಸಚಿವ
 
ಹಾಗೆ ಕೇವಲ ಓಡಾಡುತ್ತಿದ್ದರೆ ಯಾರಿಗೇನು ಲಾಭ? ಆ ಸಂವಿಧಾನದ ಮೌಲ್ಯಗಳನ್ನು ಅನುಷ್ಠಾನಿಸುವುದಕ್ಕೆ ಓಡಾಡುತ್ತಿರುವವರೇ ಅದರ ನೈಜ ರಕ್ಷಕರು.

ಕರ್ನಾಟಕ - ಮಹಾರಾಷ್ಟ್ರ ಗಡಿ ವಿಷಯ ಮುಗಿದ ಅಧ್ಯಾಯ. ಅನಗತ್ಯವಾಗಿ ಅದನ್ನು ಕೆದುಕುವ ಕೆಲಸಕ್ಕೆ ಯಾರೂ ಮುಂದಾಗಬಾರದು - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮುಗಿದ ಅಧ್ಯಾಯಗಳನ್ನು ಕೆದಕಿ ಸಮಾಜಕ್ಕೆ ಬೆಂಕಿ ಹಚ್ಚುವ ಸಂಸ್ಕೃತಿಯನ್ನು ಪೋಷಿಸಿದ್ದೇ ನೀವು ತಾನೇ?

ಬಿಜೆಪಿ ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ದೇಶವನ್ನು ಮಾರಿ ವ್ಯಕ್ತಿಗಳ ಉದ್ಧಾರ ಮಾಡುವುದು ಸತ್ಕಾರ್ಯವೇ?

ನಾನು ಮತ್ತೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್‌ನೊಳಗೆ ನಿಮಗೆ ಬೆಂಬಲ ಸಿಗುವುದು ಖಚಿತವಿದೆಯೇ?

ಸೂರ್ಯ-ಚಂದ್ರರನ್ನು ಸಾಕ್ಷಿಯಾಗಿ ಹೇಳುತ್ತೇನೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ - ಯಡಿಯೂರಪ್ಪ, ಮಾಜಿ ಸಿಎಂ
ಸೂರ್ಯ-ಚಂದ್ರರನ್ನು ಹಣದಿಂದ ಕೊಂಡು ಕೊಳ್ಳುವ ಧೈರ್ಯವೇ?

ನಾನು ಜೈಲಿಗೆ ಹೋದಾಗ ನನ್ನ ಸಮುದಾಯದವರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದು ಅದಕ್ಕೆ ನಾನು ಋಣಿಯಾಗಿದ್ದೇನೆ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿಮ್ಮ ಮೇಲಿನ ಕಳಂಕವನ್ನು ನಿಮ್ಮ ಸಮುದಾಯದ ಜನರ ಮೇಲೆ ಏಕೆ ಅಂಟಿಸುತ್ತೀರಿ?

ನಮ್ಮ ಬಸ್‌ಗೆ ಮಹಾರಾಷ್ಟ್ರದವರು, ಮಹಾರಾಷ್ಟ್ರದ ಬಸ್‌ಗೆ ನಾವು ಮಸಿ ಬಳಿಯುವುದರಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ಲಾಭವಾಗುತ್ತದೆ - ಶಿವರಾಮ ಹೆಬ್ಬಾರ್, ಸಚಿವ
ಬಸ್‌ಗಳ ಬದಲು ಎರಡು ರಾಜ್ಯಗಳ ರಾಜಕೀಯ ನಾಯಕರೇ ಪರಸ್ಪರ ಮುಖಕ್ಕೆ ಮಸಿ ಬಳಿದುಕೊಂಡರೆ ಹೇಗೆ?

ರಾಜ್ಯಾದ್ಯಂತ ನೂತನವಾಗಿ 30 ಆಡಳಿತ ಸೌಧ ನಿರ್ಮಿಸುವ ಪ್ರಸ್ತಾವವನ್ನು ಸಿಎಂಗೆ ಸಲ್ಲಿಸಲಾಗಿದೆ - ಆರ್.ಅಶೋಕ್, ಸಚಿವ
ಪ್ರಸ್ತಾವದಲ್ಲಿ ರಾಜಕಾರಣಿಗಳ ಶೇ.40 ಕಮಿಷನ್ ಉಲ್ಲೇಖವಾಗಿದೆಯೇ?

ಮಹಿಳಾ ಆಯೋಗವು ಹಲ್ಲಿಲ್ಲದ ಹಾವು, ಶಸ್ತ್ರವಿಲ್ಲದ ಸೈನ್ಯವಾಗಬಾರದು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಹಲ್ಲಿದ್ದಿದ್ದರೆ ಅಶ್ಲೀಲ ಸೀಡಿ ಪ್ರಕರಣದಲ್ಲಿ ಭಾಗವಹಿಸಿದವರೆಲ್ಲ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

share
ಪಿ.ಎ. ರೈ
ಪಿ.ಎ. ರೈ
Next Story
X