ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿದ್ದವರಿಗೆ ಟ್ರಕ್ ಢಿಕ್ಕಿ: ಕನಿಷ್ಠ 6 ಸಾವು, 10 ಮಂದಿಗೆ ಗಾಯ

ರತ್ಲಾಂ (ಮಧ್ಯಪ್ರದೇಶ): ರತ್ಲಾಂ ಜಿಲ್ಲೆಯ ಬಸ್ ನಿಲ್ದಾಣವೊಂದರಲ್ಲಿ ನಿಂತಿದ್ದ ಜನರ ಗುಂಪಿಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.
ರತ್ನಾಂ ಜಿಲ್ಲೆಯಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ರತ್ಲಾಂ-ಲೆಬಾಡ್ ರಸ್ತೆಯ ಸತ್ರುಂದಾ ಗ್ರಾಮದ ಸಮೀಪ ಈ ಘಟನೆ ನಡೆದಿದೆ.
ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾಧಿಕಾರಿ ನರೇಂದ್ರ ಕುಮಾರ್ ಸೂರ್ಯವಂಶಿ ತಿಳಿಸಿದ್ದಾರೆ.
ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಭಿಷೇಕ್ ತಿವಾರಿ ತಿಳಿಸಿದ್ದಾರೆ.
Ratlam Accident News : रतलाम के पास भीषण हादसा, बस का इंतजार कर रहे लोगों को ट्रक ने रौंदा, 6 की मौत#mpnews #ratlamnews #ratlamaccident #Naidunia https://t.co/JeB0sXAyVj pic.twitter.com/pwsQKTAyXc
— NaiDunia (@Nai_Dunia) December 4, 2022
Next Story







