Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ತೂತು ಬಿದ್ದ ಅಪ್ಪನಂಗಾಲು

ತೂತು ಬಿದ್ದ ಅಪ್ಪನಂಗಾಲು

ಬಸವರಾಜ್ ಒಕ್ಕುಂದಬಸವರಾಜ್ ಒಕ್ಕುಂದ5 Dec 2022 10:36 AM IST
share
ತೂತು ಬಿದ್ದ ಅಪ್ಪನಂಗಾಲು

ಸೆಯದ್ ಯೇಜಸ್ ಪಾಷ ಅವರ ‘ತೂತು ಬಿದ್ದ ಅಪ್ಪನಂಗಾಲು’ ಸಂಕಲನದ ಕವಿತೆಗಳು ಬದುಕಿನ ಶ್ರದ್ಧೆಯ ನೇರ ಪ್ರತಿಫಲನಗಳಾಗಿರುವುದು. ಕವಿತೆಯ ವೌಲ್ಯವನ್ನು ಹೆಚ್ಚಿಸುವಂತಿದೆ. ತೂತು ಬಿದ್ದ ಅಪ್ಪನಂಗಾಲು ಅನ್ನಕ್ಕಾಗಿ ಮಕ್ಕಳ ಕನಸುಗಳಗಾಗಿ ಕ್ರಮಿಸಿದ ಮಾರ್ಗಗಳಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳಲ್ಲಿ ರಕ್ತದ ಕಲೆಗಳವೆ. ನೋವು - ಯಾತನೆ - ತಳಮಳಗಳ ಕಂಪನವಿದೆ. ಆ ತಲ್ಲಣಗಳ ನಡುವೆಯೇ ನೆಮ್ಮದಿಯ ಹುಡುಕಾಟವಿದೆ. ಯೇಜಸ್ ಅವರ ಕವಿತೆಗಳಲ್ಲಿ ಈ ವೈಯಕ್ತಿಕ ತಳಮಳಗಳನ್ನು ದುಡಿಯುವ ವರ್ಗದ ಏಳುಬೀಳುಗಳಿಗೆ ವಿಸ್ತರಿಸುವ ಗುಣವಿದೆ. ಆದ್ದರಿಂದ ಅಂಗಾಲು ಸಹಜವಾಗಿದೆ. ಸಮಷ್ಟಿ ಬದುಕಿನ ನೋವು ಹಾಗೂ ಆತ್ಮಗೌರವಗಳಿಗೆ ರೂಪಕವಾಗುತ್ತದೆ.

 ಯೇಜಸ್ ಪಾಷ ಅವರ ಈ ಮೊದಲ ಕವನ ಸಂಕಲನ ‘ತೂತು ಬಿದ್ದ ಅಪ್ಪನಂಗಾಲು’ವಿನಲ್ಲಿ ಸಮಕಾಲೀನ ಸಂದರ್ಭದ ವಿವಿಧ ಜೀವನಾಸಕ್ತಿಗಳ ಕುರಿತಾದ ಇಪ್ಪತ್ತೊಂಭತ್ತು ಕವನಗಳವೆ.ವರ್ತಮಾನದ ಹಲವು ಹತ್ತು ರಸ್ತೆಗಳ ಕೂಟದಲ್ಲಿ ನಿಂತು ಕವಿ ಸುತ್ತ ನಡೆಯುವ ಜೀವಗಳ ಮಿಡಿತಗಳಿಗೆ ಆ ಮೂಲಕ ಏರ್ಪಡುವ ಬದುಕಿನ ಉಸಿರಾಟಕ್ಕೆ ಸಾಕ್ಷಿಯಾಗುತ್ತಾರೆ. ಕವಿಯ ಮನಸ್ಸು ಎಲ್ಲಾ ದಾರಿಗಳ ವಿಷಮತೆಗಳೊಂದಿಗೆ ಹೆಜ್ಜೆಹಾಕುತ್ತ ಆಂತರ್ಯದ ಪಿಸುಮಾತುಗಳನ್ನು ಸಹಾನುಭೂತಿಯಿಂದ ಕೇಳಿಸಿಕೊಳ್ಳಲು ತವಕಿಸುತ್ತದೆ. ತಪ್ಪಿದ ಲಯಗಳ ಅಪಶೃತಿಗಳೊಂದಿಗೆ ಸಮಶೃತಿಯ ಹುಡುಕಾಟದಲ್ಲಿ ಮುನ್ನಡೆಯುವ ಭರವಸೆಯನ್ನು ಸಹಯಾತ್ರಿಗಳಲ್ಲಿ ಮೂಡಿಸಲು ಚಡಪಡಿಸುತ್ತಾರೆ. ‘ಪಯಣ ಆರಂಭಗೊಂಡಿದೆ’ ಎಂಬ ಕವಿತೆಯ ಕೆಳಗಿನ ಸಾಲುಗಳನ್ನು ಗಮನಿಸಿದರೆ ಈ ಯಾತ್ರೆಯ ಸ್ವರೂಪ ಅರಿವಿಗೆ ಬರಬಲ್ಲದು.

ಅಂಬೆಗಾಲಿಡುತ್ತ ಆಡುತ್ತ ಹೊಸಲಿನಿಂದ ಆಚೆ ಕಾಲ್ಪಟ್ಟಾಗ ಆರಂಭದ ಪಯಣದ ಹೆಜ್ಜೆ ಬಂಧನಗಳ ಸೆಳೆತಗಳಿಗೆ ಅಂಟಿಕೊಂಡ ಬದುಕು. ಪ್ರಕೃತಿಯ ಸೊಬಗಿನ ಸೃಷ್ಟಿಯ ವಿಸ್ಮಯದ ಜೊತೆ ಪ್ರೀತಿ ಪ್ರೇಮ ಸಂಸಾರದ ಪಯಣ ಆರಂಭಗೊಂಡಿದೆ. ಮರೆಯಾಗುವ ರಾತ್ರಿಗಳಲ್ಲಿ ಒಂದು ಹಿಡಿ ನಕ್ಷತ್ರಗಳ ಲೆಕ್ಕ ಹಾಕುತ್ತ ಎಲ್ಲೊ ತಪ್ಪಾಗಿ ಮತ್ತೆ ಆರಂಭಗೊಂಡಿದೆ. ಹತ್ತಿ ಹತ್ತಿ ಕುಮಾರ ಪರ್ವತ ಎಲ್ಲೊ ದಾರಿ ತಪ್ಪಾಗಿ ಮತ್ತೆ ಅಲ್ಲೆ ಆರಂಭಗೊಂಡಿವೆ.

ವೃಷ್ಟಿ ಸಮಷ್ಟಿಗಳೆರಡೂ ಬದಕನ್ನು ಸಂಕೇತಿಸುವ ಈ ಚಿತ್ರಣ ಯೇಜಸ್ ಅವರ ಪ್ರೌಢ ಹಾಗೂ ಸಮತೋಲನದ ಚಿಂತನೆಗೆ ಸಮರ್ಥ ನಿದರ್ಶನ ಎನ್ನಬಹುದು. ಕಟು ವಾಸ್ತವಗಳ ಬೆಳಕಿನಲ್ಲಿ ಬದುಕಿನ ಭರವಸೆಗಳನ್ನು ಕಂಡುಕೊಳ್ಳಲು ಹವಣಿಸುವ ಯೇಜಸ್ ಎಲ್ಲೂ ನಿಲುಕದ ಕನಸುಗಳತ್ತ ಕೈ ಚಾಚುವುದಿಲ್ಲ. ಆದ್ದರಿಂದ ಸಿದ್ಧಾಂತ ಘೋಷಣೆಗಳಿಂದ ಇಡಿಕಿರದ ಹುಸಿ ಕ್ರಾಂತಿಕಾರಿಗಳ ಆವೇಶವಾಗಲಿ ರಾಜಕಾರಣಿಗಳಂತಹ ಟೊಳ್ಳು ಭರವಸೆಗಳಾಗಲಿ ಇಲ್ಲಿನ ಕವಿತೆಗಳಲ್ಲ. ‘ತೂತು ಬಿದ್ದ ಅಪ್ಪನಂಗಾಲು’ ಕವಿತೆ ಕೆಳಗಿನ ಸಾಲುಗಳಲ್ಲಿ ಅವರ ಒಟ್ಟು ಕಾವ್ಯಾಭಿವ್ಯಕ್ತಿಯ ಆಶಯಕ್ಕೆ ಅನುಗುಣವಾದ ನಿಲುವನ್ನು ಗುರುತಿಸಬಹುದು.

share
ಬಸವರಾಜ್ ಒಕ್ಕುಂದ
ಬಸವರಾಜ್ ಒಕ್ಕುಂದ
Next Story
X