ಡಾ.ಸಿ.ಪಿ.ಹಬೀಬ್ ರಹ್ಮಾನ್ ರಿಗೆ 'ಎಂಎಂಎ- ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ-2022'

ಮಂಗಳೂರು, ಡಿ.5: ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ 'ಎಂಎಂಎ- ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ-2022' ಈ ಬಾರಿ ಯುನಿಟ ಹೆಲ್ತ್ ಸರ್ವಿಸಸ್ ಲಿ.ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಅವರಿಗೆ ನೀಡಲಾಗುತ್ತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಹಬೀಬ್ ರಹ್ಮಾನ್‌ರ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸಾಮಾಜಿಕ ಕಾಳಜಿಯನ್ನು ಗುರುತಿಸಿ ಪ್ರಶಸ್ತಿಗೆ ಅವರನ್ನನು ಆಯ್ಕೆ ಮಾಡಲಾಗಿದೆ ಎಂದು ಎಂಎಂಎ ಅಧ್ಯಕ್ಷ ಕೆ.ಜೈರಾಜ್ ಬಿ. ರೈ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ಡಿ.7ರಂದು ಸಂಜೆ 6:0ಕ್ಕೆ ನಗರದ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಕೆ.ವಿಶ್ವನಾಥ ಕಾಮತ್ 1997ರಲ್ಲಿ ಈ ಪ್ರಶಸ್ತಿ ಸ್ಥಾಪಿಸಿ, ಅಂದಿನಿಂದ ಸಾಧಕರಿಗೆ ಪ್ರಶಸ್ತಿ ಕೊಡುತ್ತಾ ಬಂದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಂಎ ಉಪಾಧ್ಯಕ್ಷ ಡಾ.ಕೆ.ಜನಾರ್ದನ, ಕೋಶಾಕಾರಿ ಎಡ್ವರ್ಡ್ ಕುವೆಲ್ಲೊ, ಕಾರ್ಯಕಾರಿ ಸದಸ್ಯ ಡಾ.ದೇವರಾಜ್ ಕೆ. ಉಪಸ್ಥಿತರಿದ್ದರು.
Next Story