ಮಂಗಳೂರು : ಚಿನ್ನಾಭರಣದ ಮಳಿಗೆಯಲ್ಲಿ ಪುಂಡಾಟಿಕೆ ?

ಮಂಗಳೂರು: ನಗರದ ಚಿನ್ನಾಭರಣದ ಮಳಿಗೆಯೊಂದರಲ್ಲಿ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಯುವಕರ ಗುಂಪೊಂದು ಪುಂಡಾಟಿಕೆಗೈದ ಘಟನೆ ಇಂದು ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ ಮಾರಾಟ ವಿಭಾಗದ ಇಬ್ಬರು ತುಂಬಾ ಅನ್ಯೋನ್ಯತೆಯಿಂದಿದ್ದಾರೆ ಎಂದು ಆರೋಪಿಸಿ ಗುಂಪು ಚಿನ್ನಾಭರಣದ ಮಳಿಗೆಗೆ ನುಗ್ಗಿ ಹಲ್ಲೆ ನಡೆಸಿದರು ಎನ್ನಲಾಗಿದೆ.
ಮಾಹಿತಿ ಪಡೆದ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಯುವಕ-ಯುವತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Next Story