ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ಪ್ರಾತ್ಯಕ್ಷಿಕೆ ಸಲ್ಲಿಕೆಗೆ ಅವಕಾಶ
ಉಡುಪಿ: ‘ಕರ್ನಾಟಕ ರಾಜ್ಯ: ಒಂದು ರಾಜ್ಯ ಹಲವು ಜಗತ್ತುಗಳು’ ಎಂಬ ಘೋಷವಾಕ್ಯಕ್ಕೆ ಪೂರಕವಾಗುವಂತೆ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತಂತೆ ನೈಸರ್ಗಿಕ, ಧಾರ್ಮಿಕ, ವನ್ಯಜೀವಿ, ಆಹಾರ ಪದ್ಧತಿ ಹಾಗೂ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ವಿಭಿನ್ನ ಹಾಗೂ ವೈಶಿಷ್ಟ್ಯ ಪೂರ್ಣ ಸಮಗ್ರ ಮಾಹಿತಿಯನ್ನೊಳಗೊಂಡ ಆಕರ್ಷಣೀಯ ನೂತನ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಅಥವಾ ಇ-ಮೇಲ್ - ad@udupitourism.com-ಗೆ ಡಿಸೆಂಬರ್ 15ರೊಳಗೆ ಸಲ್ಲಿಸಬಹುದು.
ಒಂದು ಆಕರ್ಷಕ ಪ್ರಾತ್ಯಕ್ಷಿಕೆಯ ವಿಜೇತರಿಗೆ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2574868ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story