Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನ್ಯಾಯಾಂಗ ನೇಮಕಾತಿಗಳ ಕುರಿತು ಸುಪ್ರೀಂ...

ನ್ಯಾಯಾಂಗ ನೇಮಕಾತಿಗಳ ಕುರಿತು ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ಗುದ್ದಾಟವೇಕೆ.....?

ಉಮಂಗ ಪೋದ್ದಾರ್- scroll.inಉಮಂಗ ಪೋದ್ದಾರ್- scroll.in6 Dec 2022 9:50 PM IST
share
ನ್ಯಾಯಾಂಗ ನೇಮಕಾತಿಗಳ ಕುರಿತು ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ಗುದ್ದಾಟವೇಕೆ.....?

ಹೊಸದಿಲ್ಲಿ: ಕಳೆದ ಶುಕ್ರವಾರ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ (ಎನ್ಜೆಎಸಿ) ಕಾಯ್ದೆಯನ್ನು ರದ್ದುಗೊಳಿಸಿದ್ದಕ್ಕಾಗಿ ನ್ಯಾಯಾಂಗವನ್ನು ಟೀಕಿಸಿದ್ದರು. 2014ರಲ್ಲಿ ಸಂಸತ್ತು ಅಂಗೀಕರಿಸಿದ್ದ ಈ ಕಾಯ್ದೆಯು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಂಗಗಳಿಗೆ ನ್ಯಾಯಾಧೀಶರ ನೇಮಕಾತಿಗಳಲ್ಲಿ ನ್ಯಾಯಾಂಗದ ಪ್ರಾಮುಖ್ಯಕ್ಕೆ ತಿಲಾಂಜಲಿ ನೀಡಲು ಉದ್ದೇಶಿಸಿತು

ಸಂಸತ್ತು ಅಂಗೀಕರಿಸಿದ್ದ ಕಾನೂನು ಜನರ ಆಶಯಗಳನ್ನು ಪ್ರತಿಫಲಿಸಿತ್ತು ಮತ್ತು ಅದನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತ್ತು. ವಿಶ್ವದಲ್ಲಿ ಇಂತಹ ವಿದ್ಯಮಾನ ನಡೆದಿರುವ ಇನ್ನೊಂದು ನಿದರ್ಶನವಿಲ್ಲ ಎಂದು ಧನಕರ್ ಕಾರ್ಯಕ್ರಮದಲ್ಲಿ ಹೇಳಿದ್ದರು. 

ಧನಕರ್ ಅವರ ಈ ಹೇಳಿಕೆಗಳು ಕೊಲಿಜಿಯಂ ವ್ಯವಸ್ಥೆ ಕುರಿತು ಕೇಂದ್ರ ಮತ್ತು ಸರ್ವೋಚ್ಚ ನ್ಯಾಯಾಲಯದ ಮಧ್ಯೆ ನಡೆಯುತ್ತಿರುವ ಗುದ್ದಾಟದ ನಡುವೆಯೇ ಹೊರಬಿದ್ದಿರುವುದರಿಂದ ಮಹತ್ವವನ್ನು ಪಡೆದುಕೊಂಡಿವೆ.

ನ್ಯಾಯಾಂಗ ನೇಮಕಾತಿಯು ಸದಾ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ವಿವಾದವನ್ನು ಸೃಷ್ಟಿಸುತ್ತಲೇ ಬಂದಿದೆ, ಇತ್ತೀಚಿಗಂತೂ ನ್ಯಾಯಾಧೀಶರ ನೇಮಕಾತಿಗಾಗಿರುವ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ವ್ಯವಸ್ಥೆಯ ಮೇಲೆ ದಾಳಿಗಳು ಹೆಚ್ಚುತ್ತಲೇ ಇವೆ.

ನ್ಯಾ.ಡಿ.ವೈ.ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರಾಗಿ ನೇಮಕಗೊಂಡಿರುವ ಸಂದರ್ಭದಲ್ಲೇ ಈ ದಾಳಿಗಳು ನಡೆಯುತ್ತಿವೆ. ನ್ಯಾ.ಚಂದ್ರಚೂಡ್ ಅವರು ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ. ಅವರು 2012ರ ಬಳಿಕ ಇಷ್ಟೊಂದು ಸುದೀರ್ಘ ಅಧಿಕಾರಾವಧಿಯನ್ನು ಹೊಂದಿರುವ ಮೊದಲ ಸಿಜೆಐ ಆಗಿದ್ದಾರೆ. ನವಂಬರ್ ನಲ್ಲಿ ಆರಂಭಗೊಂಡಿರುವ ನ್ಯಾ.ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಕನಿಷ್ಠ 19 ನ್ಯಾಯಾಧೀಶರನ್ನು ನೇಮಕಗೊಳಿಸಬೇಕಿದೆ. ಇದು ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಬಲ (34)ದ ಅರ್ಧದಷ್ಟಿದೆ.
ಆದಾಗ್ಯೂ,ನ್ಯಾಯಾಂಗವೂ ತನ್ನ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದೆ ಮತ್ತು ನೇಮಕಾತಿಗಳಿಗೆ ಸಂಬಂಧಿಸಿ ವಿಚಾರಣೆಯಲ್ಲಿರುವ ಪ್ರಕರಣವೊಂದರಲ್ಲಿ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸಿದ್ದಕ್ಕಾಗಿ ಕೇಂದ್ರಕ್ಕೆ ಛೀಮಾರಿಯನ್ನು ಹಾಕಿದೆ.

ಹಗ್ಗ ಜಗ್ಗಾಟ
ನ್ಯಾಯಾಧೀಶರ ನೇಮಕಾತಿಯು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ದೀರ್ಘಕಾಲದ ಹಗ್ಗಜಗ್ಗಾಟವಾಗಿದೆ. ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರೊಂದಿಗೆ ‘ಸಮಾಲೋಚನೆ’ಯ ಬಳಿಕ ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರನ್ನು ನೇಮಕಗೊಳಿಸಬೇಕು ಎಂದು ಸಂವಿಧಾನವು ಹೇಳುತ್ತದೆ. ಸ್ವಾತಂತ್ರದ ಬಳಿಕ ನ್ಯಾಯಾಧೀಶರ ನೇಮಕಾತಿಯಲ್ಲಿ ಕೇಂದ್ರ ಸರಕಾರವು ಪ್ರಮುಖ ಪಾತ್ರವನ್ನು ಹೊಂದಿತ್ತು. ಆದರೆ 1993ರಲ್ಲಿ ಕಾರ್ಯಾಂಗವು ನ್ಯಾಯಾಂಗಕ್ಕೆ ಸಲಹೆ ನೀಡಲು ಬದ್ಧವಾಗಿದೆ ಎಂದು ಎತ್ತಿ ಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಸಿಜೆಐ ಮತ್ತು ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಕೊಲಿಜಿಯಂ ವ್ಯವಸ್ಥೆಯನ್ನು ಸ್ಥಾಪಿಸಿತ್ತು.

ಈ ವ್ಯವಸ್ಥೆಯನ್ನು ತೊಡೆದುಹಾಕಲು 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕೊಲಿಜಿಯಂ ಬದಲು ಎನ್ಜೆಎಸಿ ಅನ್ನು ತರಲು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿತ್ತು. ಎನ್ಜೆಎಸಿ ಸಿಜೆಐ, ಸರ್ವೋಚ್ಚ ನ್ಯಾಯಾಲಯದ ಇಬ್ಬರು ಅತ್ಯಂತ ಹಿರಿಯ ನ್ಯಾಯಾಧೀಶರು, ಕಾನೂನು ಸಚಿವರು ಮತ್ತು ಇಬ್ಬರು ‘ಗಣ್ಯ ವ್ಯಕ್ತಿ’ಗಳನ್ನು ಒಳಗೊಂಡಿರಲಿತ್ತು.

ಆದರೆ, ಈ ತಿದ್ದುಪಡಿಯನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅದು ನ್ಯಾಯಾಂಗದ ಸ್ವಾತಂತ್ರವನ್ನು ಅತಿಕ್ರಮಿಸಿರುವುದರಿಂದ ಅಸಾಂವಿಧಾನಿಕವಾಗಿದೆ ಎಂದು ಹೇಳಿತ್ತು. ನ್ಯಾಯಾಧೀಶರ ನೇಮಕಾತಿಗಳಲ್ಲಿ ನ್ಯಾಯಾಂಗದ ಪ್ರಾಮುಖ್ಯವು ಸಂವಿಧಾನದ ಮೂಲಭೂತ ಅಂಶಗಳ ಭಾಗವಾಗಿದೆ ಮತ್ತು ಅದನ್ನು ಸಂಸತ್ತು ಸಹ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.

ಕೇಂದ್ರದಿಂದ ಬಿಕ್ಕಟ್ಟು ಸೃಷ್ಟಿ
ನೇಮಕಾತಿ ಪ್ರಕ್ರಿಯೆಯ ಮೇಲೆ ಮತ್ತೆ ನಿಯಂತ್ರಣವನ್ನು ಸಾಧಿಸುವ ಪ್ರಯತ್ನವಾಗಿ ಕೇಂದ್ರವು ನ್ಯಾಯಾಧೀಶರ ನೇಮಕಾತಿಗಾಗಿ ಹೆಸರುಗಳನ್ನು ಕೊಲಿಜಿಯಂ ಮರುಶಿಫಾರಸು ಮಾಡಿದ್ದರೂ ಅವುಗಳನ್ನು ತಡೆಹಿಡಿದಿದೆ. ಕೊಲಿಜಿಯಂ ನೇಮಕಾತಿಗಾಗಿ ಹೆಸರೊಂದನ್ನು ಮರುಶಿಫಾರಸು ಮಾಡಿದಾಗ ಕಾನೂನುಬದ್ಧವಾಗಿ ಕೇಂದ್ರವು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ, ಕೊಲಿಜಿಯಂ ಒಟ್ಟಿಗೆ ಹೆಸರುಗಳನ್ನು ಶಿಫಾರಸು ಮಾಡಿದ್ದರೂ ಕೆಲವರನ್ನು ಕೇಂದ್ರವು ನೇಮಕಗೊಳಿಸಬಹುದು ಮತ್ತು ಇತರರನ್ನು ಕೈ ಬಿಡಬಹುದು.

ಇತ್ತೀಚಿಗೆ, ನ.28ರಂದು ಕೊಲಿಜಿಯಂ ನ್ಯಾಯಾಧೀಶರ ನೇಮಕಾತಿಗಾಗಿ ಶಿಫಾರಸು ಮಾಡಿದ್ದ 21 ಹೆಸರುಗಳ ಪೈಕಿ 19ನ್ನು ಕೇಂದ್ರವು ವಾಪಸ್ ಕಳುಹಿಸಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಿಫಾರಸುಗಳನ್ನು ಮರಳಿಸಿರುವುದು ಅಸಾಮಾನ್ಯ ಸನ್ನಿವೇಶವಾಗಿದೆ. ಈ ಪೈಕಿ ಒಂಭತ್ತು ಹೆಸರುಗಳನ್ನು ಕೊಲಿಜಿಯಂ ಮೊದಲ ಬಾರಿಗೆ ಕಳುಹಿಸಿದ್ದರೆ, ಇತರ 10 ಹೆಸರುಗಳನ್ನು ಮರುಶಿಫಾರಸು ಮಾಡಿತ್ತು.

ಇದಲ್ಲದೆ ಸರಕಾರದ ಸದಸ್ಯರಿಂದಲೂ ಕೊಲಿಜಿಯಂ ವ್ಯವಸ್ಥೆಯ ಮೇಲೆ ಬಹಿರಂಗ ದಾಳಿಗಳು ಹೆಚ್ಚುತ್ತಿವೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹಲವಾರು ಸಂದರ್ಭಗಳಲ್ಲಿ ಕೊಲಿಜಿಯಂ ಪಾರದರ್ಶಕವಾಗಿಲ್ಲ ಮತ್ತು ಉತ್ತರದಾಯಿತ್ವವನ್ನು ಹೊಂದಿಲ್ಲ ಎಂದು ದೂರಿದ್ದಾರೆ. ನ.25ರಂದು ಅವರು ಸರಕಾರವು ಕೊಲಿಜಿಯಂ ಶಿಫಾರಸುಗಳನ್ನು ಕಣ್ಣು ಮುಚ್ಚಿಕೊಂಡು ಪಾಲಿಸಲು ಸಾಧ್ಯವಿಲ್ಲ ಮತ್ತು ಅದು ತನ್ನದೇ ವಿವೇಚನೆಯನ್ನು ಬಳಸಬೇಕಿದೆ ಎಂದು ಹೇಳಿದ್ದರು.

ನ್ಯಾಯಾಂಗದ ಪ್ರತಿಕ್ರಿಯೆ
ಈ ನಡುವೆ ನ್ಯಾಯಾಂಗವು ನ್ಯಾಯಾಲಯದೊಳಗೆ ಮತ್ತು ಹೊರಗೆ ಕೊಲಿಜಿಯಂ ಕುರಿತು ಟೀಕೆಗಳಿಗೆ ಪ್ರತಿಕ್ರಿಯಿಸಿದೆ. ಹಾಲಿ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಧೀಶರ ನೇಮಕಾತಿಗಳಿಗೆ ಸಂಬಧಿಸಿದಂತೆ ಬೆಂಗಳೂರು ವಕೀಲರ ಸಂಘವು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. ಕೊಲಿಜಿಯಂ ಮರುಶಿಫಾರಸು ಮಾಡಿರುವ 11 ಹೆಸರುಗಳನ್ನು ಕೇಂದ್ರವು ಮೂಲೆಗುಂಪು ಮಾಡಿದೆ ಮತ್ತು ಈ ಪೈಕಿ 2021, ಸೆಪ್ಟಂಬರ್ ನಷ್ಟು ಹಿಂದೆ ಮರುಶಿಫಾರಸು ಮಾಡಿದ್ದ ಹೆಸರೂ ಸೇರಿದೆ ಎಂದು ಅದು ಅರ್ಜಿಯಲ್ಲಿ ದೂರಿದೆ. ತನ್ಮೂಲಕ ಸರಕಾರವು ಸರ್ವೋಚ್ಚ ನ್ಯಾಯಾಲಯವು ವಿಧಿಸಿದ್ದ ಕಾಲಮಿತಿಯನ್ನು ಉಲ್ಲಂಘಿಸಿದೆ ಎಂದು ಅದು ಬೆಟ್ಟು ಮಾಡಿದೆ.

ನ.11ರ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೊಲಿಜಿಯಂ ನ್ಯಾಯಾಧೀಶರ ಹೆಸರನ್ನು ಮರುಶಿಫಾರಸು ಮಾಡಿದಾಗ ಕೇಂದ್ರ ಸರಕಾರವು ತನ್ನ ಆಕ್ಷೇಪವನ್ನು ಬದಿಗೊತ್ತಿ ಅವರನ್ನು ನೇಮಕಗೊಳಿಸಲೇಬೇಕು ಎಂದು ಒತ್ತಿ ಹೇಳಿದೆ. ನೇಮಕಾತಿಗಳಲ್ಲಿ ವಿಳಂಬಕ್ಕೆ ಸಮರ್ಥನೆಯನ್ನು ಕೋರಿ ಅದು ಕೇಂದ್ರ ಕಾನೂನು ಕಾರ್ಯದರ್ಶಿಗೆ ನೋಟಿಸನ್ನೂ ಜಾರಿಗೊಳಿಸಿದೆ.

share
ಉಮಂಗ ಪೋದ್ದಾರ್- scroll.in
ಉಮಂಗ ಪೋದ್ದಾರ್- scroll.in
Next Story
X