ಮಂಗಳೂರು: ನೋಟಿನ ಬಂಡಲ್ ಮೂಡಿಸಿದ ಕುತೂಹಲ

ಮಂಗಳೂರು, ಡಿ.6: ಕೆಲವು ದಿನಗಳ ಹಿಂದೆ ನಗರದ ಪಂಪ್‌ವೆಲ್ ಬಳಿ ಬಿದ್ದು ಸಿಕ್ಕಿದ ನೋಟಿನ ಬಂಡಲ್ ಪ್ರಕರಣ ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಮೆಕ್ಯಾನಿಕ್ ಆಗಿರುವ ವ್ಯಕ್ತಿಗೆ ಪಂಪ್‌ವೆಲ್ ಬಳಿ ನೋಟಿನ ಬಂಡಲ್ ಸಿಕ್ಕಿತ್ತು ಎನ್ನಲಾಗಿದೆ. ಅದನ್ನು ಗಮನಿಸಿದ ಇನ್ನೊಬ್ಬಾತ ವಿಚಾರಿಸಿದ್ದು, ಆತನಿಗೂ ಒಂದು ಬಂಡಲ್ ಕೊಟ್ಟು ಬಳಿಕ ಇಬ್ಬರೂ ಸೇರಿ ಮದ್ಯ ಸೇವಿಸಿದರು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೆಕ್ಯಾನಿಕ್ ಆಗಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಈವರೆಗೂ ನೋಟಿನ ಬಗ್ಗೆ ಯಾರೂ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
‘ನಮಗೆ ಇನ್ನೂ ಈ ಬಗ್ಗೆ ದೂರು ಬಂದಿಲ್ಲ. ಅಲ್ಲದೆ ನೋಟಿನ ಬಂಡಲ್‌ನಲ್ಲಿ 10 ಲಕ್ಷ ರೂ. ಇರಲಿಲ್ಲ. 49 ಸಾವಿರ ರೂ. ಇತ್ತು. ಆ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story