ಪತ್ರಕರ್ತೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಸ್ರೇಲ್ ಸೇನೆ ವಿರುದ್ಧ ದಾವೆ : ಅಲ್ಜಝೀರಾ
ದುಬೈ, ಡಿ.6: ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಸ್ರೇಲ್ ಸೇನೆಯ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿರುವುದಾಗಿ ಅಲ್ಜಝೀರಾ(Al Jazeera) ಸುದ್ಧಿಸಂಸ್ಥೆ ಮಂಗಳವಾರ ಹೇಳಿದೆ.
ಕಳೆದ ಮೇ ತಿಂಗಳಿನಲ್ಲಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆಯ ಸಂದರ್ಭ ಗುಂಡೇಟಿನಿಂದ ಶಿರೀನ್ ಹತರಾಗಿದ್ದರು. ಈ ಪ್ರಕರಣದ ಬಗ್ಗೆ ಅಲ್ಜಝೀರಾ ಸುದ್ಧಿಜಾಲದ ಕಾನೂನು ತಂಡ ನಡೆಸಿದ ತನಿಖೆಯ ವರದಿಯ ಬಳಿಕ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story