ವೇಶ್ಯಾವಾಟಿಕೆ ಚಟುವಟಿಕೆ ಆರೋಪ: ನಾಲ್ವರು ವಶಕ್ಕೆ; ಪ್ರಕರಣ ದಾಖಲು

ಕೋಟೆಕಾರು: ಬೀರಿ ಕೋಟೆಕಾರು ಬಳಿ ವೇಶ್ಯಾವಾಟಿಕೆ ಚಟುವಟಿಕೆ ನಡೆದ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೀರಿ ನಿವಾಸಿ ಇಕ್ಬಾಲ್, ಆತನ ಪತ್ನಿ, ಶರ್ಫುದ್ದೀನ್, ಇರ್ಶಾದ್ ಅಡ್ಯನಡ್ಕ ಎಂಬವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇಕ್ಬಾಲ್ ಪ್ರಕರಣದ ಮುಖ್ಯ ಆರೋಪಿ ಆಗಿದ್ದು, ಶರ್ಫುದ್ದೀನ್, ಇರ್ಶಾದ್ ಅಡ್ಯನಡ್ಕ ಗಿರಾಕಿಗಳು ಎಂದು ತಿಳಿದು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story