Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಗತ್ತನ್ನು ಕಿರಿದುಗೊಳಿಸಿರುವ ನಾಗರಿಕ...

ಜಗತ್ತನ್ನು ಕಿರಿದುಗೊಳಿಸಿರುವ ನಾಗರಿಕ ವಿಮಾನಯಾನ

ಇಂದು ವಿಶ್ವ ನಾಗರಿಕ ವಿಮಾನಯಾನ ದಿನ

ಪೂರ್ವಿಪೂರ್ವಿ7 Dec 2022 10:16 AM IST
share
ಜಗತ್ತನ್ನು ಕಿರಿದುಗೊಳಿಸಿರುವ  ನಾಗರಿಕ ವಿಮಾನಯಾನ
ಇಂದು ವಿಶ್ವ ನಾಗರಿಕ ವಿಮಾನಯಾನ ದಿನ

ಡಿಸೆಂಬರ್ 7 ವಿಶ್ವ ನಾಗರಿಕ ವಿಮಾನಯಾನ ದಿನ. ಆಧುನಿಕ ಜಗತ್ತಿನ ಸಾರಿಗೆಯಲ್ಲಿ ನಾಗರಿಕ ವಿಮಾನಯಾನದ ಪಾತ್ರವನ್ನು ಮತ್ತು ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುವಲ್ಲಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಅದು ವಹಿಸುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ನಾಗರಿಕ ವಿಮಾನಯಾನ ದಿನವನ್ನು ಆಚರಿಸಲಾಗುತ್ತದೆ.

1944ರಲ್ಲಿ ಅಮೆರಿಕ ಸೇರಿದಂತೆ 54 ರಾಷ್ಟ್ರಗಳು ಚಿಕಾಗೋದಲ್ಲಿ ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿದವು. ಚಿಕಾಗೋ ಕನ್ವೆನ್ಷನ್ ಎಂದು ಕರೆಯಲಾಗುವ ಈ ಒಪ್ಪಂದ ಜಾಗತಿಕ ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಜಗತ್ತಿನ ಎಲ್ಲರಿಗೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವ ಆಶಯದ್ದಾಗಿತ್ತು. ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನಯಾನ ಸೇವೆಯ (ಐಸಿಎಒ) 50ನೇ ವಾರ್ಷಿಕೋತ್ಸವದ ಅಂಗವಾಗಿ 1994ರಲ್ಲಿ ನಾಗರಿಕ ವಿಮಾನಯಾನ ದಿನಾಚರಣೆ ಶುರುವಾಯಿತು. 1996ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 7ನ್ನು ನಾಗರಿಕ ವಿಮಾನಯಾನ ದಿನವೆಂದು ಅಧಿಕೃತವಾಗಿ ಘೋಷಿಸಲಾಯಿತು.

ನಾಗರಿಕ ವಿಮಾನಯಾನ ಉದ್ಯಮದ ಕೊಡುಗೆಗಳ ಬಗ್ಗೆ ಮತ್ತು ಜಾಗತಿಕ ಕ್ಷಿಪ್ರ ಸಾರಿಗೆ ಜಾಲವನ್ನು ಅರಿತುಕೊಳ್ಳಲು ವಿವಿಧ ದೇಶಗಳಿಗೆ ಸಹಾಯ ಮಾಡುವಲ್ಲಿ ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ವಿಶಿಷ್ಟ ಪಾತ್ರದ ಬಗ್ಗೆ ವಿಶ್ವಾದ್ಯಂತ ಜಾಗೃತಿಯನ್ನು ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನಯಾನ ದಿನಾಚರಣೆ ಮೂಲಕ ಹರಡುತ್ತ ಬರಲಾಗಿದೆ.

ಸುರಕ್ಷತೆ, ಭದ್ರತೆ, ವಿಶ್ವಾಸಾರ್ಹ ವಾಯು ಸಾರಿಗೆಗೆ ಕೈಗೊಳ್ಳಬೇಕಾದ ಕ್ರಮ, ಸುರಕ್ಷತೆಗೆ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಇವೆಲ್ಲವೂ ಈ ದಿನದ ಆಚರಣೆಯ ಉದ್ದೇಶಗಳಲ್ಲಿ ಸೇರುತ್ತವೆ.

ವಿಮಾನಯಾನ ಉದ್ಯಮವು ಗಣನೀಯ ಆರ್ಥಿಕ ಚಟುವಟಿಕೆಯ ಮೂಲವಾಗಿದೆ, ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಏರ್ ನ್ಯಾವಿಗೇಷನ್ ಸೇವೆ ಮೊದಲಾದ ವಿಭಾಗಗಳು ಬಹುದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುತ್ತವೆ. ಇದಲ್ಲದೆ, ವಿಮಾನಯಾನವು ಉತ್ಪಾದನಾ ವಲಯದಲ್ಲಿ ಅಂದರೆ ವಿಮಾನ, ಇಂಜಿನ್‌ಗಳು ಮತ್ತು ಇತರ ಪ್ರಮುಖ ತಂತ್ರಜ್ಞಾನಗಳನ್ನು ಉತ್ಪಾದಿಸುವ ಕಂಪೆನಿಗಳಲ್ಲಿ ಉದ್ಯೋಗ ಸೃಷ್ಟಿಯಲ್ಲೂ ನೇರ ಪಾತ್ರ ವಹಿಸುತ್ತದೆ.

ಇವುಗಳ ಹೊರತಾಗಿ, ಪರೋಕ್ಷವಾಗಿಯೂ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವಾಯುಯಾನ ಉದ್ಯಮ ನೆರವಾಗುತ್ತದೆ ಇದು ಪೂರೈಕೆದಾರರಿಂದ ಸಾಧ್ಯವಾಗುತ್ತದೆ. ವಾಯುಯಾನ ಇಂಧನ ಪೂರೈಕೆದಾರರು; ವಿಮಾನ ನಿಲ್ದಾಣ ಸೌಲಭ್ಯಗಳನ್ನು ನಿರ್ಮಿಸುವ ನಿರ್ಮಾಣ ಕಂಪನಿಗಳು; ವಿಮಾನದಲ್ಲಿ ಬಳಸುವ ಉಪಘಟಕಗಳ ಪೂರೈಕೆದಾರರು; ವಿಮಾನ ನಿಲ್ದಾಣದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾದ ಸರಕುಗಳ ತಯಾರಕರು ಮತ್ತು ವ್ಯಾಪಾರ ಸೇವೆಗಳ ವಲಯದಲ್ಲಿ ಕಾಲ್ ಸೆಂಟರ್‌ಗಳು, ಮಾಹಿತಿ ತಂತ್ರಜ್ಞಾನ ಮತ್ತು ಅಕೌಂಟೆನ್ಸಿಯಂತಹ ವಿವಿಧ ರೀತಿಯ ಚಟುವಟಿಕೆಗಳು ಇವನ್ನೆಲ್ಲ ಇಲ್ಲಿ ಉಲ್ಲೇಖಿಸಬಹುದು.

ಇನ್ನು ಸಾಮಾಜಿಕ ಪ್ರಯೋಜನಗಳ ಕುರಿತು ನೋಡುವುದಾದರೆ, ವಿಮಾನಯಾನವು ರಾಷ್ಟ್ರಗಳು ಮತ್ತು ಜನರೆದುರು ಅವರ ಭೌಗೋಳಿಕ ಸ್ಥಳವನ್ನು ಮೀರಿದ ವ್ಯಾಪಕ ಮತ್ತು ಅನನ್ಯ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಜನರು ತಮಗೆ ಬೇಕಾದುದನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ. ಸುಧಾರಿತ ಜೀವನೋಪಾಯ, ಆಹಾರ, ಆರೋಗ್ಯ, ಶಿಕ್ಷಣ -ಇವೆಲ್ಲದರಲ್ಲೂ ನಾಗರಿಕ ವಿಮಾನಯಾನದ ಪಾತ್ರವಿದೆ.

ವಿರಾಮ ಕಾಲದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡುವುದು, ಸಾಮಾಜಿಕ ಕಾರಣಗಳನ್ನು ಉತ್ತೇಜಿಸುವಲ್ಲಿ ಕೂಡ ವಾಯುಯಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ದುರ್ಬಲ ಗುಂಪುಗಳಿಗೆ, ಹಾಗೆಯೇ ವಲಸಿಗ ಸಮುದಾಯಗಳಿಗೆ ಮತ್ತು ದೂರದ ಮತ್ತು ಕಡಿಮೆ ಸಾಂದ್ರತೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ, ವಾಯು ಸಾರಿಗೆ ಸೇವೆಗಳು ಅವರ ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಇತ್ತೀಚಿನ ದಿನಗಳಲ್ಲಿ ಎಟುಕುತ್ತಿರುವುದು ಹೊಸ ಕಾಲದ ಬೆಳವಣಿಗೆಯಾಗಿದೆ.

share
ಪೂರ್ವಿ
ಪೂರ್ವಿ
Next Story
X