ಮುಳಬಾಗಿಲು | ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿಯಿಕ್ಕಿದ ತಾಯಿ; ಒಂದು ಮಗು ಮೃತ್ಯು
ಕೋಲಾರ, ಡಿ.7: ತಾಯಿ ತನ್ನಿಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿಯಿಕ್ಕಿದ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿಂದು ನಡೆದಿದೆ. ಘಟನೆಯಲ್ಲಿ ಒಂದು ಮಗು ಮೃತಪಟ್ಟಿದೆ. ಗಂಭೀರಾವಸ್ಥೆಯಲ್ಲಿದ್ದ ಇನ್ನೊಂದು ಮಗುವನ್ನು ರಕ್ಷಿಸಲಾಗಿದೆ.
ಮುಳಬಾಗಿಲು ಪಟ್ಟಣದ ಅಂಜನಾದ್ರಿ ಬೆಟ್ಟದಲ್ಲಿ ಆಂಧ್ರ ಪ್ರದೇಶ ಮೂಲದ ಜ್ಯೋತಿ ಎಂಬಾಕೆ ಈ ಕೃತ್ಯ ಎಸಗಿದವರು.
ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಮುಳಬಾಗಿಲು ಪೊಲೀಸರ ಭೇಟಿ ನೀಡಿ, ಗಾಯಾಳು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜ್ಯೋತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story