ಮತದಾರರ ಪಟ್ಟಿಯ ನೋಂದಣಿ ಪರಿಷ್ಕರಣೆ; ಅಧಿಕಾರಿಗಳ ವರ್ಗಾಯಿಸದಂತೆ ಚುನಾವಣಾ ಆಯೋಗ ನಿರ್ದೇಶನ
ಬೆಂಗಳೂರು, ಡಿ.7: ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿಯ ನೋಂದಣಿ ಪರಿಷ್ಕರಣಾ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆಯು ಮುಕ್ತಾಯ ಆಗುವವರೆಗೂ ಇದರಲ್ಲಿ ತೊಡಗಿಕೊಂಡಿರುವ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆ ಮಾಡದಂತೆ ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ತಹಶೀಲ್ದಾರ್, ಉಪ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರುಗಳ ಯಾವುದೇ ವರ್ಗಾವಣೆ ಮತ್ತು ನಿಯೋಜನೆ ಮಾಡದಂತೆ ಆಯೋಗ ತಿಳಿಸಿದೆ.
ಮತದಾರರ ನೋಂದಣಿ ಪರಿಷ್ಕರಣಾ ಪ್ರಕ್ರಿಯೆ ಮುಕ್ತಾಯವಾದ ನಂತರ ನಿಯಮಾನುಸಾರ ಪರಿಶೀಲಿಸಿ ಮಂಡಿಸುವಂತೆ ಕೋರಲು ಕಾರ್ಯದರ್ಶಿಯವರಿಂದ ನಿರ್ದೇಶಿತಳಾಗಿದ್ದೇನೆ ಎಂದು ಕಂದಾಯ ಇಲಾಖೆ ಆಪ್ತ ಕಾರ್ಯದರ್ಶಿ ಕೆ.ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story