ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಬಿಷಪ್ ನೇಮಕ

ಮಂಗಳೂರು, ಡಿ.7: ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಬಿಷಪ್ ಆಗಿ ರೈ.ರೆವೆ ಹೇಮಚಂದ್ರ ಕುಮಾರ್ ಅವರನ್ನು ನೇಮಕ ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸಿಎಸ್‌ಐ ಶಾಂತಿ ಮಹಾದೇವಾಲಯದಲ್ಲಿ ಬುಧವಾರ ನಡೆದ ಬಿಷಪ್ ದೀಕ್ಷೆ ಆರಾಧನೆಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ಮಹಾಧರ್ಮಾಧ್ಯಕ್ಷ ರೆವೆ ಎ. ಧರ್ಮರಾಜ ರಸಲಾಂ ಈ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭ ಸಿಎಸ್‌ಐ ಡೆಪ್ಯುಟಿ ಮೋಡರೇಟರ್ ರೈರೆ ಡಾ.ರೂಬೆನ್ ಮಾರ್ಕ್, ಸಿಎಸ್‌ಐ ಮಹಾಕಾರ್ಯದರ್ಶಿ ಅಡ್ವಕೇಟ್ ಸಿ. ಫೆರ್ನಾಂಡಿಸ್ ರತಿನ್‌ರಾಜ್, ಕೋಯಮತ್ತೂರು ಡಯಾಸಿಸ್ ಬಿಷಪ್ ರೈರೆ ತಿಮೋಥಿ ರವಿಂದರ್, ಕೊಲ್ಲಂ ಕೊಟ್ಟಾರಕರ ಬಿಷಪ್ ರೈರೆ ಮಾರ್ಜಿನ್ ಸಿ. ಬೋರ್ಗೈ, ಮೋಡರೇಟರ್ಸ್ ಸೆಕ್ರಟರಿ ರೆವೆ ರೋಹನ್ ಪುಷ್ಪರಾಜನ್ ಉಪಸ್ಥಿತರಿದ್ದರು.
Next Story