VIDEO- ಕಲಬುರಗಿ: ಹಳಿ ದಾಟುವಾಗ ಗೂಡ್ಸ್ ರೈಲು–ಪ್ಲಾಟ್ಫಾರ್ಮ್ ಮಧ್ಯೆ ಸಿಲುಕಿದ ತಾಯಿ -ಮಗ ಕೂದಲೆಳೆ ಅಂತರದಲ್ಲಿ ಪಾರು
ಕಲಬುರಗಿ: ಹಳಿ ದಾಟುವಾಗ ಪ್ಲಾಟ್ಫಾರ್ಮ್ ಮತ್ತು ಚಲಿಸುವ ಗೂಡ್ಸ್ ರೈಲಿನ ನಡುವಿನ ಕಿರಿದಾದ ಅಂತರದಲ್ಲಿ ಸಿಲುಕಿದ ತಾಯಿ ಮಗ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿರುವ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ನಿಲ್ದಾಣದ ಮೂರನೇ ಪ್ಲಾಟ್ ಫಾರಂನಿಂದ ಒಂದನೇ ಪ್ಲಾಟ್ ಫಾರಂಗೆ ತಾಯಿ ಮಗ ಹಳಿ ದಾಟಿಕೊಂಡು ಬರುವಾಗ ಗೂಡ್ಸ್ ರೈಲು ಆಗಮಿಸಿದೆ. ಮುಂದೆ ಹೋಗಿದ್ದ ತಾಯಿ ರೈಲಿಗೆ ಸಿಲುಕುವ ಆತಂಕದಿಂದ ಮಗ ರಕ್ಷಣೆಗೆ ಧಾವಿಸಿದ್ದಾನೆ. ಬಳಿಕ ಇಬ್ಬರೂ ಹಳಿ ಪಕ್ಕದ ಕಿರಿದಾದ ಅಂತರದಲ್ಲಿ ರೈಲು ದಾಟುವವರೆಗೆ ಅವಚಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ.
ಮಂಗಳವಾರ ಸಂಜೆ 6.40 ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story