ಡಿ.9: ಉಳ್ಳಾಲದಲ್ಲಿ ಸೀರತ್ ಸಮಾವೇಶ

ಮಂಗಳೂರು, ಡಿ.8: ಯುನಿವೆಫ್ ಕರ್ನಾಟಕದ ‘ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯುತ್ತಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಡಿ.9ರ ಸಂಜೆ 6.45ಕ್ಕೆ ಉಳ್ಳಾಲ ಪುರಸಭಾ ಮೈದಾನದಲ್ಲಿ ಸೀರತ್ ಸಮಾವೇಶ ಜರುಗಲಿದೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ನಮ್ಮ ಜೀವನ ಮತ್ತು ಪ್ರವಾದಿ(ಸ)ರ ಬೋಧನೆಗಳು’ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ನಝೀರ್ ಉಳ್ಳಾಲ್ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story