ಕಾಂಗ್ರೆಸ್ ಜನಸಂಖ್ಯೆ ನಿಯಂತ್ರಣ ಕಾಯ್ದೆ ತಂದಿದ್ದರೆ ನಾನು 4 ಮಕ್ಕಳ ತಂದೆಯಾಗುತ್ತಿರಲಿಲ್ಲ: ಬಿಜೆಪಿ ಸಂಸದ ರವಿ ಕಿಶನ್

ಹೊಸದಿಲ್ಲಿ: ಬಿಜೆಪಿ (BJP) ಸಂಸದ ರವಿ ಕಿಶನ್ (Ravi Kishan) ಅವರು ತಾನು ನಾಲ್ಕು ಮಕ್ಕಳ ತಂದೆಯಾಗಲು ಕಾಂಗ್ರೆಸ್ (Congress) ಪಕ್ಷವೇ ಕಾರಣ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ತಂದಿದ್ದರೆ ತಾನು "ನಿಲ್ಲಿಸುತ್ತಿದ್ದೆ" ಎಂದು ಕಿಶನ್ ಹೇಳಿದ್ದಾರೆ.
ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಖ್ಯಾತರಾಗಿರುವ ಕಿಶನ್, ದಕ್ಷಿಣದ ಕೆಲವು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸಂಸತ್ತಿನಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಮಂಡಿಸುವ ಮುನ್ನ ಸುದ್ದಿ ವಾಹಿನಿ ಆಜ್ ತಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಂಸದರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಗೋರಖ್‌ಪುರದ ಲೋಕಸಭಾ ಸಂಸದರಾಗಿರುವ ಕಿಶನ್, ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಸಮರ್ಥಿಸಿದ್ದು, ಸತತ ಗರ್ಭಧಾರಣೆಯಿಂದ ತಮ್ಮ ಹೆಂಡತಿಯ ಆರೋಗ್ಯವು ಹದಗೆಡುತ್ತಿತ್ತು ಎಂದು ಹೇಳಿದ್ದಾರೆ.
"ಈಗ ನಾನು ಪ್ರಬುದ್ಧನಾಗಿದ್ದೇನೆ ಮತ್ತು ನನ್ನ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ಕಂಡುಕೊಂಡಿದ್ದೇನೆ, ನಾನು ಅವಳನ್ನು (ತನ್ನ ಹೆಂಡತಿ) ನೋಡಿ ವಿಷಾದಿಸುತ್ತೇನೆ" ಎಂದು ಅವರು ಕಿಶನ್ ಹೇಳಿದರು. "ಕಾಂಗ್ರೆಸ್ ಸರ್ಕಾರವು ಮೊದಲೇ ಮಸೂದೆಯನ್ನು ತಂದಿದ್ದರೆ, ನಾನು ನಿಲ್ಲಿಸುತ್ತಿದ್ದೆ..." ಎಂದು ಅವರು ಹೇಳುತ್ತಿದ್ದಂತೆ, ಸಭಿಕರು ಚಪ್ಪಾಳೆ ತಟ್ಟಿದ್ದಾರೆ.







