ಎಸ್ಕೆಎಸೆಸ್ಸೆಫ್ ಇಸ್ತಿಖಾಮ ರಾಜ್ಯ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು, ಡಿ.9: ಎಸ್ಕೆಎಸೆಸ್ಸೆಫ್ ಇದರ ಆದರ್ಶ ವಿಭಾಗವಾದ ಇಸ್ತಿಖಾಮ ಕರ್ನಾಟಕ ರಾಜ್ಯ ಸಮಿತಿಯನ್ನು ಬಿ.ಸಿ.ರೋಡು ತಲಪಾಡಿಯಲ್ಲಿರುವ ಸಮಸ್ತ ಕಚೇರಿಯಲ್ಲಿ ರಚಿಸಲಾಯಿತು.
ಇಸ್ತಿಖಾಮದ ರಾಜ್ಯ ಉಸ್ತುವಾರಿ ಖಾಸಿಮ್ ದಾರಿಮಿ ಸವಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬೂಬಕರ್ ಸಿದ್ದೀಕ್ ದಾರಿಮಿ ಮೂಡುಬಿದಿರೆ ದುಆಗೈದರು. ಅಬ್ದುಸ್ಸಲಾಂ ಫೈಝಿ ಎಡಪ್ಪಲಂ ಉದ್ಘಾಟಿಸಿದರು.
ಇಸ್ತಿಖಾಮ ಕರ್ನಾಟಕ ರಾಜ್ಯ ನೂತನ ಸಮಿತಿಯ ಅಧ್ಯಕ್ಷರಾಗಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಸಂಚಾಲಕರಾಗಿ ರಫೀಕ್ ಬಾಖವಿ ಮಠ, ಕಾರ್ಯನಿರತ ಸಂಚಾಲಕರಾಗಿ ಅಶ್ರಫ್ ಬಾಖವಿ ಚಾಪಲ್ಲ, ಉಸ್ತುವಾರಿಯಾಗಿ ಖಾಸಿಮ್ ದಾರಿಮಿ ಸವಣೂರು, ಉಪಾಧ್ಯಕ್ಷರಾಗಿ ಸಲಾಂ ಫೈಝಿ ಎಡಪ್ಪಲಂ, ಅಬೂಬಕರ್ ಸಿದ್ದೀಕ್ ದಾರಿಮಿ ಒಮಾನ್, ಇಸ್‌ಹಾಖ್ ಫೈಝಿ ಕುಕ್ಕಿಲ, ಸಹ ಸಂಚಾಲಕರಾಗಿ ಅಬ್ದುಲ್ ಮಜೀದ್ ದಾರಿಮಿ ತೋಡಾರು, ಅಬ್ಬಾಸ್ ದಾರಿಮಿ ಕೆಲಿಂಜ, ಮುಸ್ತಫಾ ಅನ್ಸಾರಿ ಕಣ್ಣೂರು, ಸದಸ್ಯರಾಗಿ ರಫೀಕ್ ಹುದವಿ ಕೋಲಾರ, ನಝೀರ್ ಫೈಝಿ ತೋಡಾರು, ಶಾಫಿ ಫೈಝಿ ಕೊಡಗು ಆಯ್ಕೆಗೊಂಡರು.
Next Story