Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿದ...

ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿದ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್

9 Dec 2022 11:18 PM IST
share
ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿದ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್

ಮುಲ್ತಾನ್ (ಪಾಕಿಸ್ತಾನ), ಡಿ. 9: ತನ್ನ ಚೊಚ್ಚಲ ಟೆಸ್ಟ್ ಆಡಿದ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಶುಕ್ರವಾರ ತನ್ನ ಅಮೋಘ ಪ್ರದರ್ಶನದ ಮೂಲಕ ಇಂಗ್ಲೆಂಡ್ನ ಏಳು ವಿಕೆಟ್ ಗಳನ್ನು ಉರುಳಿಸಿದ್ದಾರೆ. ಇದರೊಂದಿಗೆ ಚೊಚ್ಚಲ ಟೆಸ್ಟ್ ನಲ್ಲೇ ಏಳು ವಿಕೆಟ್ ಗಳನ್ನು ಗಳಿಸಿದ ಪಾಕಿಸ್ತಾನದ ಮೂರನೇ ಆಟಗಾರ ಅವರಾಗಿದ್ದಾರೆ.

ಮುಲ್ತಾನ್ನಲ್ಲಿ ನಡೆದ ಎರಡನೇ ಟೆಸ್ಟ್ ನ  ಆರಂಭಿಕ ದಿನವಾದ ಶುಕ್ರವಾರ ಅಬ್ರಾರ್ ಅಹ್ಮದ್ರ ಮಾರಕ ಬೌಲಿಂಗ್ ನಿಂದಾಗಿ ಇಂಗ್ಲೆಂಡ್ 281 ರನ್ಗಳಿಗೆ ತನ್ನ ಮೊದಲ ಇನಿಂಗ್ಸ್ ಮುಗಿಸಿತು. ಅಬ್ರಾರ್ 7 ವಿಕೆಟ್ಗಳನ್ನು ಪಡೆಯಲು 114 ರನ್ಗಳನ್ನು ನೀಡಿದರು.


ಬಳಿಕ ಪಾಕಿಸ್ತಾನವು ತನ್ನ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 107 ರನ್ಗಳನ್ನು ಗಳಿಸಿದೆ. ಆರಂಭಿಕರಾದ ಅಬ್ದುಲ್ಲಾ ಶಫೀಕ್ (14) ಮತ್ತು ಇಮಾಮ್ ಉಲ್ ಹಕ್ (0) ಬೇಗನೇ ನಿರ್ಗಮಿಸಿದರು. ನಾಯಕ ಬಾಬರ್ ಆಝಮ್ (61) ಮತ್ತು ಸೌದ್ ಶಕೀಲ್ (32) ದಿನದಾಟದ ಕೊನೆಯ ವೇಳೆಗೆ ಕ್ರೀಸ್ನಲ್ಲಿ ಉಳಿದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ  ಇಳಿದ ಇಂಗ್ಲೆಂಡ್ ಪರವಾಗಿ ಬೆನ್ ಡಕೆಟ್ (63) ಮತ್ತು ಓಲೀ ಪೋಪ್ (60) ಅರ್ಧ ಶತಕಗಳನ್ನು ಬಾರಿಸಿದರು.


ನಾಯಕ ಬಾಬರ್ ಆಝಮ್ ಇನಿಂಗ್ಸ್ ನ ಒಂಭತ್ತನೇ ಓವರ್ನಲ್ಲೇ ನಿಗೂಢ ಸ್ಪಿನ್ನರ್ನನ್ನು ದಾಳಿಗಿಳಿಸಿದರು. ಅಬ್ರಾರ್ ನಿರಾಶೆಗೊಳಿಸಲಿಲ್ಲ. ಐದನೇ ಎಸೆತದಲ್ಲೇ ಎದುರಾಳಿಗೆ ಆಘಾತ ನೀಡಿದರು. ಆರಂಭದಿಂದಲೇ ಸ್ಪಿನ್ನರ್ಗಳಿಗೆ ನೆರವು ನೀಡಲು ಆರಂಭಿಸಿದ ಪಿಚ್ಚನ್ನು ಸರಿಯಾಗಿ ಬಳಸಿಕೊಂಡ ಲೆಗ್ ಸ್ಪಿನ್ನರ್ ವೈವಿಧ್ಯಮಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡಿದರು.


ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ಸರಣಿಯಲ್ಲಿ 1-0ಯಿಂದ ಮುಂದಿದೆ. ರಾವಲ್ಪಿಂಡಿಯಲ್ಲಿ ನಡೆದಿರುವ ಮೊದಲ ಟೆಸ್ಟನ್ನು ಅದು 74 ರನ್ ಗಳಿಂದ ಗೆದ್ದಿದೆ. 


ತಂಡವು 2005ರ ಬಳಿಕ ಪಾಕಿಸ್ತಾನಕ್ಕೆ ಮೊದಲ ಟೆಸ್ಟ್ ಪ್ರವಾಸವನ್ನು ಕೈಗೊಂಡಿದೆ. ಅಬ್ರಾರ್ ಅವರು ಝಾಕ್ ಕ್ರಾಲಿ (19), ಡಕೆಟ್, ಜೋ ರೂಟ್ (8), ಪೋಪ್, ಹ್ಯಾರಿ ಬ್ರೂಕ್ (9), ನಾಯಕ ಬೆನ್ ಸ್ಟೋಕ್ಸ್ (30) ಮತ್ತು ವಿಲ್ ಜಾಕ್ಸ್ (31)ರ ವಿಕೆಟ್ಗಳನ್ನು ಒಂದರ ನಂತರ ಒಂದರಂತೆ ಉರುಳಿಸಿದರು.

ಡಕೆಟ್ ಮತ್ತು ಪೋಪ್ 61 ಎಸೆತಗಳಲ್ಲಿ 79 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಇದು ಇಂಗ್ಲೆಂಡ್ ಇನಿಂಗ್ಸ್ ನ ಪ್ರಮುಖ ಅಂಶವಾಯಿತು. ಒಂದು ಹಂತದಲ್ಲಿ ಅವರು ತಮ್ಮ ರಿವರ್ಸ್ ಸ್ವೀಪ್ ಶಾಟ್ಗಳ ಮೂಲಕ ಅಬ್ರಾರ್ ಅಹ್ಮದ್ ಸೇರಿದಂತೆ ಎದುರಾಳಿ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದರು.

share
Next Story
X