ಉಳ್ಳಾಲ | ಸರಣಿ ಕಳ್ಳತನ: ಅಂಗಡಿಗಳಲ್ಲಿದ್ದ ನಗದು, ಇನ್ನಿತರ ಸೊತ್ತುಗಳ ಕಳವು

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಸರಣಿ ಕಳ್ಳತನ ನಡೆದಿರುವುದಾಗಿ ವರದಿಯಾಗಿದೆ. ನಾಲ್ಕು ಅಂಗಡಿಗಳಿಗೆ ಶುಕ್ರವಾರ ತಡರಾತ್ರಿ ನುಗ್ಗಿದ ಕಳ್ಳರು ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳವುಗೈದಿದ್ದಾರೆ.
ತಲಪಾಡಿ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದ್ದು, ಅಂಗಡಿ ವ್ಯಾಪಾರ ನಡೆಸುವ ಕುಲದೀಪ್, ಶಂಕರ್ , ಶ್ರೀಧರ್, ಅಶ್ರಫ್ ಮತ್ತು ಮೆಹಮೂದ್ ಅವರ ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಂಗಡಿಗಳಲ್ಲಿ ಡ್ರಾವರ್ ನಲ್ಲಿ ಇದ್ದ ಹಣ ಕಳವು ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ
ಅಶ್ರಫ್ ಎಂಬವರಿಗೆ ಸೇರಿದ ಝೆರಾಕ್ಸ್ ಅಂಗಡಿಯಿಂದ ನಗದು, ಕಳವು ನಡೆಸಲಾಗಿದೆ. ರಾತ್ರಿ ವೇಳೆ ಎಲ್ಲಾ ಅಂಗಡಿಗಳ ಬೀಗ ಮುರಿದು ಕಳ್ಳರು ಕೈಚಳಕ ತೋರಿಸಿದ್ದಾರೆ. ಮಂಜೇಶ್ವರ ಹಾಗೂ ಕುಂಜತ್ತೂರು ಭಾಗದಲ್ಲಿಯೂ ಇದೇ ರೀತಿಯ ಕಳವು ಕೃತ್ಯ ನಡೆದಿದ್ದು, ಇದೀಗ ತಲಪಾಡಿಗೂ ವ್ಯಾಪಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.