ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಬ್ರೆಝಿಲ್ ಗೆ ಆಘಾತಕಾರಿ ಸೋಲು: ದುಃಖ ತಡೆಯಲಾರದೆ ಕಣ್ಣೀರಿಟ್ಟ ನೇಮರ್
ದೋಹಾ: ಹೊಸ ಪೀಳಿಗೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ನೇಮರ್ ಜೂನಿಯರ್ ಶುಕ್ರವಾರ ಕ್ರೊಯೇಷಿಯಾ ವಿರುದ್ಧದ FIFA ವಿಶ್ವಕಪ್ 2022 ಕ್ವಾರ್ಟರ್-ಫೈನಲ್‌ನಲ್ಲಿ ಬ್ರೆಝಿಲ್ ತಂಡ ಆಘಾತಕಾರಿ ಸೋಲನುಭವಿಸಿದ ನಂತರ ದುಃಖ ತಡೆಯಲಾರದೆ ಮೈದಾನದಲ್ಲಿ ಕುಳಿತುಕೊಂಡು ಕಣ್ಣೀರಿಟ್ಟರು. ಸಹ ಆಟಗಾರರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.
ಕ್ವಾರ್ಟರ್ ಫೈನಲ್ ನಲ್ಲಿ ನಿಗದಿತ ಸಮಯದಲ್ಲಿ ಗೋಲು ಬರಲಿಲ್ಲ. ನೇಮರ್ ಅವರು ಹೆಚ್ಚುವರಿ-ಸಮಯದಲ್ಲಿ ಗೋಲು ಗಳಿಸಿದಾಗ ಬ್ರೆಝಿಲ್ ಸೆಮಿಫ್-ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿತ್ತು. ಆದರೆ ಬ್ರೂನೋ ಪೆಟ್‌ಕೋವಿಕ್ ಗೋಲು ಗಳಿಸಿ ಕ್ರೊಯೇಶಿಯಾ 1-1 ರಿಂದ ಸಮಬಲ ಸಾಧಿಸಲು ಕಾರಣರಾದರು. ಆಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ತನ್ನ ಕರಾಮತ್ತು ತೋರಿದ ಕ್ರೊಯೇಶಿಯಾ ತಂಡ ಬ್ರೆಝಿಲ್ ಅನ್ನು 4-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.
ಈ ಸೋಲಿನೊಂದಿಗೆ 6ನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ಬ್ರೆಝಿಲ್ ಕನಸು ಭಗ್ನಗೊಂಡಿತು. ಹೀಗಾಗಿ ನೇಮರ್ ಜೂನಿಯರ್ ಗೆ ಸಾಂತ್ವನ ಹೇಳುವುದು ಕಷ್ಟವಾಯಿತು.
ಖತರ್ ವಿಶ್ವಕಪ್‌ನಲ್ಲಿ ತಮ್ಮನ್ನು ಬೆಂಬಲಿಸಲು ಭಾರೀ ಸಂಖ್ಯೆಯಲ್ಲಿ ಬಂದಿದ್ದ ಬ್ರೆಝಿಲ್ ಅಭಿಮಾನಿಗಳಿಗೆ ಗುಡ್ ಬೈ ಹೇಳುವಾಗ ಪ್ಯಾರಿಸ್ ಸೇಂಟ್-ಜರ್ಮೈನ್ ಫಾರ್ವರ್ಡ್ ಆಟಗಾರ ನೇಮರ್ ಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ನೇಮರ್ ಅವರ ಕೆಲವು ಸಹ ಆಟಗಾರರು ಸಹ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ.
ಆರನೇ ಪ್ರಶಸ್ತಿಗಾಗಿ ಬ್ರೆಝಿಲ್ ಕನಿಷ್ಠ ನಾಲ್ಕು ವರ್ಷಗಳ ಕಾಲ ಕಾಯಬೇಕಾಗುತ್ತದೆ. 2026 ರ ವೇಳೆಗೆ ಅದು ಕೊನೆಯದಾಗಿ ಪ್ರಶಸ್ತಿ ಗೆದ್ದು 24 ವರ್ಷಗಳು ಆಗುತ್ತವೆ.
ತಮ್ಮ ವೃತ್ತಿಜೀವನದ ಅಂತಿಮ ಫಿಫಾ ವಿಶ್ವಕಪ್‌ನಲ್ಲಿ ಆಡುತ್ತಿರುವ ಬ್ರೆಝಿಲ್‌ನ ಅನುಭವಿ ಸೆಂಟರ್-ಬ್ಯಾಕ್ ಥಿಯಾಗೊ ಸಿಲ್ವಾ ಅವರು ಟ್ರೋಫಿಯನ್ನು ಎತ್ತದೆ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆಯಬೇಕಾಯಿತು ಎಂಬ ವಿಚಾರವನ್ನುಒಪ್ಪಿಕೊಂಡರು.
BBC pundits laughing at Neymar Jr. crying? Shocking and vile. #FIFAWorldCup pic.twitter.com/7SFGtS5ZUu
— Simon Rowntree (@SimonRowntree1) December 9, 2022
whoever cries for brazil and its they’re first time watching wc and being “a big fan of neymar” bcz he’s hot please shut up ur crying we dont care i bet yall dont even know neymars first club litterally shut up pic.twitter.com/9O68uwjb0f
— dimarrashid (@dimarrashid7) December 9, 2022
#Neymar crying #Brazil pic.twitter.com/kkFRyKb5KM
— Nanush AD (@janoobeia90) December 9, 2022
Neymar has his good things, he has his bad as well. But he has always been gracious in defeat.
— Juan Arango (@JuanG_Arango) December 9, 2022
Here he is with Ivan Perisic's son after losing. pic.twitter.com/yWPj7ZkAMa
El hijo de Iván Perisic fue a saludar a Neymar apenas terminó la definición por penales y el brasileño había quedado afuera del mundial. Momento épico que mezcla inocencia, admiración y respeto! pic.twitter.com/JScTMkKinj
— Alejandro Figueredo (@afigue2010) December 10, 2022