ಮಂಗಳೂರು | ಜೋಯ್ ಅಲುಕಾಸ್ ನವೀಕೃತ ಮಳಿಗೆ ಉದ್ಘಾಟನೆ

ಮಂಗಳೂರು, ಡಿ.10: ನಗರದ ಪಳ್ನೀರ್ನಲ್ಲಿ ಜೋಯ್ ಅಲುಕಾಸ್ ನವೀಕೃತ ಮಳಿಗೆ ಉದ್ಘಾಟನೆ ಶನಿವಾರ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲೇ ಅತೀ ಹೆಚ್ಚು ಚಿನ್ನದ ವ್ಯವಹಾರ ನಡೆಯುವ ನಗರದಲ್ಲಿ ಮಂಗಳೂರು 3ನೇ ಸ್ಥಾನದಲ್ಲಿದೆ ಎಂದರು.
ಇಂತಹ ನಗರದಲ್ಲಿ ಕಳೆದ 12ವರ್ಷಗಳಿಂದ ಜೋಯ್ ಅಲುಕಾಸ್ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 11 ದೇಶದಲ್ಲಿ 160 ಶಾಖೆ ಹಾಗೂ ದೇಶಾದ್ಯಂತ 85 ಶಾಖೆಗಳನ್ನು ಒಳಗೊಂಡಿರುವ ಈ ಸಂಸ್ಥೆ ಮಂಗಳೂರಿನಲ್ಲಿ ಅತ್ಯಾಕರ್ಷಕ ರೀತಿಯ ವಿನ್ಯಾಸದ ಶಾಖೆಗಳನ್ನು ತೆರೆದು ವ್ಯವಹರಿಸುವ ಜತೆ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿದೆ. ತಂತ್ರಜ್ಞಾನ ಬಳಕೆಯೊಂದಿಗೆ ಕಡಿಮೆ ಮೇಕಿಂಗ್ ಚಾರ್ಜ್ನೊಂದಿಗೆ ಉತ್ತಮ ಸೇವೆ ನೀಡುತ್ತಿರುವ ಸಂಸ್ಥೆಗೆ ಅಭಿನಂದನೆಗಳು ಎಂದರು.
ಈ ಸಂಸ್ಥೆಯೂ ಮಂಗಳೂರಿನಲ್ಲಿ ವ್ಯವಹಾರ ನಡೆಸುವ ಜತೆಗೆ ಬಡವರಿಗೆ ಮನೆ ಕಟ್ಟಿಕೊಡುವ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ನೀಡುತ್ತಿದ್ದು, ಈ ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವ, ಚಿತ್ರ ನಟಿಯರಾದ ಸೋನಾಲ್ ಮೊಂತೆರೋ, ಶಿವಾನಿ ರೈ, ನಟ ಸ್ವರಾಜ್ ಶೆಟ್ಟಿ, ಶಾಖಾ ಮ್ಯಾನೇಜರ್ ಹರೀಶ್ ಪಿ.ಎಸ್., ರಿಟೈಲ್ ಮ್ಯಾನೇಜರ್ ರಾಜೇಶ್ ಕೃಷ್ಣನ್, ಅನಿಲ್ದಾಸ್, ಪೂಜಾ ಪೈ ಮತ್ತಿತರರು ಉಪಸ್ಥಿತರಿದ್ದರು.
ಜೋಯ್ ಅಲುಕಾಸ್ ನವೀಕೃತ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ಅಲುಕಾಸ್ನಲ್ಲಿ ವಿಶ್ವದರ್ಜೆಯ ಆಭರಣ ಬ್ರ್ಯಾಂಡ್ ಇದ್ದು, ಅತ್ಯಾಧುನಿಕ ಮಳಿಗೆ ಆಭರಣ ಪ್ರಿಯರಿಗೆ ಸಂತಸಕರ ಮತ್ತು ಉತ್ಕೃಷ್ಟ ಖರೀದಿ ಅನುಭವ ನೀಡಲಿದೆ. ಉದ್ಘಾಟನೆ ಹಿನ್ನಲೆಯಲ್ಲಿ ಉತ್ತೇಜಕ ಉದ್ಘಾಟನಾ ಕೊಡುಗೆಗಳು, ಶೇ.25 ರಿಯಾಯಿತಿ ನೀಡಿರುವುದು ಗ್ರಾಹಕರಿಗೆ ಅನುಕೂಲ.
-ಸೋನಾಲ್ ಮೊಂತೆರೋ, ಚಿತ್ರನಟಿ