ಡಿ.12ರಿಂದ KRS ಪಕ್ಷದಿಂದ ಮಹಿಳೆಯರನ್ನು ರಾಜಕೀಯಕ್ಕೆ ಅಹ್ವಾನಿಸುವ ಅಭಿಯಾನ

ಬೆಂಗಳೂರು, ಡಿ.10: ಮಹಿಳೆಯರನ್ನು ರಾಜಕೀಯಕ್ಕೆ ಅಹ್ವಾನಿಸುವ ಸಲುವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಡಿ.12ರಿಂದ ಅಭಿಯಾನವನ್ನು ಕೈಗೊಳಲಿದ್ದೇವೆ ಎಂದು ಕೋಲಾರ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷೆ ಇಂದಿರಾ ರೆಡ್ಡಿ ಹೇಳಿದರು.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ, ಮಂಡ್ಯ, ಮೈಸೂರು ಹಾಸನ ಮುಂತಾದ ಸ್ಥಳಗಳಲ್ಲಿ ಅಭಿಯಾನವನ್ನು ನಡೆಸಲಿದ್ದೇವೆ. ಈ ವೇಳೆ ಮಹಿಳಾ ಗುಂಪುಗಳ ನಡುವೆ ಸಂವಾದ, ನೋಂದಣಿ ಮಾಡುವುದು ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದರು.
Next Story





