MEIF ವತಿಯಿಂದ ಬಂಟ್ವಾಳ, ಬೆಳ್ತಂಗಡಿ ಝೋನಲ್ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

ಬಂಟ್ವಾಳ: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ಹಾಗೂ ಉಡುಪಿ ಜಿಲ್ಲೆ (MEIF) ವತಿಯಿಂದ ಬಂಟ್ವಾಳ ಮತ್ತು ಬೆಳ್ತಂಗಡಿ ಝೋನಲ್ ಮಟ್ಟದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ "Talent Hunt -2022 -23" GEM ಆಂಗ್ಲ ಮಾಧ್ಯಮ ಶಾಲೆ ಗೊಳ್ತಮಜಲಿನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು GEM ಆಂಗ್ಲ ಮಾಧ್ಯಮ ಶಾಲೆ ಗೊಳ್ತಮಜಲ್ ಇದರ ಆಡಳಿತ ನಿರ್ದೇಶಕರಾದ ಹನೀಫ್ ಹಾಜಿ ಗೊಳ್ತಮಜಲ್ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು MEIF ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದ್ದರು. MEIF ಈಸ್ಟ್ ಝೋನ್ ಉಪಾಧ್ಯಕ್ಷರಾದ ಕೆ.ಎಂ ಮುಸ್ತಫಾ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿ, MEIF ಸಂಸ್ಥೆಯ ಪ್ರಸಕ್ತ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.
MEIF ಪ್ರೋಗ್ರಾಮ್ ಸೆಕ್ರೆಟರಿ ರಿಯಾಝ್ ಅಹ್ಮದ್ ಸ್ವಾಗತಿಸಿ, ಝೋನಲ್ ಕನ್ವಿನರ್ ಶೇಖ್ ರಹ್ಮತುಲ್ಲಾಹ್ ಬುರೂಜ್ ವಂದಿಸಿದರು. GEM ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾದ್ಯಾಯರಾದ ನಿರಂಜನ್ ಅವರು ಉಪಸ್ಥಿತರಿದ್ದರು.
GEM ಶಾಲಾ ಸಂಚಾಲಕರಾದ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ MEIF ವಿದ್ಯಾ ಸಂಸ್ಥೆಗಳ 102 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳು ಆಕರ್ಷಣೀಯವಾಗಿ ಮೂಡಿಬಂದಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು 2023ರ ಜನವರಿ ತಿಂಗಳಿನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ " Talent Hunt " ನಲ್ಲಿ ಸ್ಪರ್ಧಿಸಲಿದ್ದಾರೆ.
ವಿವರಗಳು:
ಡ್ರಾಯಿಂಗ್ - ನಿಸ್ಮತ್ ಅಫ್ರೀನಾ (ಝೆನಿತ್ ಆಂಗ್ಲ ಮಾಧ್ಯಮ ಶಾಲೆ, ಮುಡಿಪು)
ಕ್ವಿಝ್ - ಅಕ್ಷತಾ ಮತ್ತು ಅಭಿನವ್ (ಗುಡ್ ಫ್ಯೂಚರ್ ಚೈಲ್ಡ್ ಸ್ಕೂಲ್, ಪಿಳ್ಯ)
ಪಿಕ್ & ಸ್ಪೀಕ್ - ಹುದಾ ಫಾತಿಮಾ (ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ)
ಸೈನ್ಸ್ ಮಾಡೆಲ್ - ರಾಝ ಅಲಿ ಖಾನ್ ಮತ್ತು ಮೊಹಮ್ಮದ್ ತಬ್ರಝ್ (ಬುರೂಜ್ ಆಂಗ್ಲ ಮಾಧ್ಯಮ ಶಾಲೆ ರಾಝ ನಗರ) ಮೊಹಮ್ಮದ್ ಹಾಶಿರ್ ಮತ್ತು ಮೊಹಮ್ಮದ್ ಫವಾಝ್ (ಗುಡ್ ಫ್ಯೂಚರ್ ಚೈಲ್ಡ್ ಸ್ಕೂಲ್ , ಪಿಳ್ಯ) ಮೊಹಮ್ಮದ್ ಇಕ್ಬಾಲ್ ಮತ್ತು ಮೊಹಮ್ಮದ್ ಅಕ್ಮಲ್ (ಹಾರಿಝೋನ್ ಪಬ್ಲಿಕ್ ಸ್ಕೂಲ್ , ವಿಟ್ಲ)
ಕಾರ್ಯಕ್ರಮದ ತೀರ್ಪುಗಾರರಾಗಿ ಶೈಖ್ ಆದಮ್ ಸಾಹೇಬ್ ವೊಗ್ಗ, ಅಕ್ಬರ್ ಅಲಿ ಉಲಿಬೈಲ್, ಹಸೀನಾ ಸುರಿಬೈಲ್ ಅವರು ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು GEM ಆಂಗ್ಲ ಮಾಧ್ಯಮ ಶಾಲೆ ಗೊಳ್ತಮಜಲ್ ವಹಿಸಿತ್ತು.