ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವ

ಮಂಗಳೂರು, ಡಿ.10: ಕ್ರೈಸ್ತ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನನ (ಡಿಪಿಪಿ) ಸುವರ್ಣ ಮಹೋತ್ಸವ ಇಂದು ನಗರದ ಕಂಕನಾಡಿ ಫಾದರ್ ಮುಲ್ಲರ್‌ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಗೋವಾ ಮತ್ತು ಡಾಮನ್‌ಕಾರ್ಡಿನಲ್ ಫಿಲಿಪ್ ನೇರಿ ಫೆರಾವೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಸಮುದಾಯದಲ್ಲಿ ಸಹಭಾಗಿತ್ವವನ್ನು ನಿರ್ಮಿಸಲು ಮತುತಿಸಮಾಜದ ಪರಿವರ್ತನೆ ಕಾಣಲು ಯೇಸುಕ್ರಿಸತಿನ ಮಾದರಿಯಂತೆ ನಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರವಾದಿಯಾಗಿರಬೇಕು ಎಂದು ಕರೆ ನೀಡಿದರು.
ಕಾರ್ಡಿನಲ್‌ಅಧ್ಯಕ್ಷತೆಯಲ್ಲಿ ದಿವ್ಯ ಬಲಿಪೂಜೆ ನಡೆದು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಾರ್ಡಿನಲ್ ಫಿಲಿಪೆ ನೇರಿ ಫೆರಾವೊ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್‌ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾ, ಬೆಂಗಳೂರು ಆರ್ಚ್ ಬಿಷಪ್‌ಅತೀ ವಂದನೀಯ ಡಾ. ಪೀಟರ್ ಮಚಾಡೋ, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾ. ಜೋನ್ ಮೈಕಲ್ ಡಿಕುನ್ಹಾ ಮತ್ತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ನಿರ್ದೇಶಕರಾದ ಫಿಲೋಮಿನಾ ಲೋಬೋ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್ ಡಿ ಸೋಜಾ, ವಿಧಾನ ಸಭೆಯ ಮಾಜಿ ಸದಸ್ಯ ಜೆ.ಆರ್. ಲೋಬೋ, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂ. ರಿಚರ್ಡ್ ಕುವೆಲ್ಲೊ, ಧರ್ಮ ಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಜೆ. ಬಿ. ಸಲ್ಡಾನ್ಹಾ ಮತ್ತು ರಾಯ್ ಕ್ಯಾಸ್ಟೆಲಿನೊ, ಪಾಲನಾ ಪರಿಷತ್ತಿನ ಪ್ರಸ್ತುತ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ ಮತ್ತು ಮಾಜಿ ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು.
ಆರ್ಚ್ ಬಿಷಪ್ ಪೀಟರ್ ಮಚಾದೊ ಅವರು ಈ ಸಂದರ್ಭದಲ್ಲಿ ಪ್ರಕಟಿಸಲಾದ ಏಕ್ತಾರಾಚಿಂ ಭಾಂಗ್ರಾಳಿಂ ಮೆಟಾಂ (ಏಕತೆಯ ಸುವರ್ಣ ಹೆಜ್ಜೆಗಳು) ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಸ್ಮರಣಿಕೆಯು ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಸಂಗತಿಗಳು, ಅಂಕಿಅಂಶಗಳು ಮತ್ತು ಸಾಧನೆಗಳನ್ನು ದಾಖಲಿಸಿದೆ.
ಈ ಸಂದರ್ಭದಲ್ಲಿ ಮಾಜಿ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಎಂ.ಪಿ ನೊರೊನ್ಹಾ ಸ್ವಾಗತಿಸಿದರು. ರಾಕ್ಣೊ ವಾರಪತ್ರಿಕೆಯ ನಿಯೋಜಿತ ಸಂಪಾದಕ ವಂ. ರೂಪೇಶ್ ಮಾಡ್ತಾ ಮತ್ತು ಅನಿತಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಪರಿಷತ್ತಿನ ಕಾರ್ಯದರ್ಶಿ ಡಾ.ಜಾನ್ ಡಿ ಸಿಲ್ವಾ ವಂದಿಸಿದರು.