ಕೆಎಸ್‌ಸಿಎ ಅಂತರ್ ಶಾಲಾ ಕ್ರಿಕೆಟ್: ಮಾಧವ-ಶಾರದಾ ಶಾಲೆಗಳು ಫೈನಲಿಗೆ

ಬ್ರಹ್ಮಾವರ, ಡಿ.10: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಎಸ್.ಎಂ.ಎಸ್. ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಟದ ಉಪಾಂತ್ಯ ಪಂದ್ಯಗಳಲ್ಲಿ ಮಣಿಪಾಲದ ಮಾಧವ ಕೃಪಾ ಶಾಲಾ ತಂಡವು ಶಿರ್ವದ ವಿದ್ಯಾವರ್ಧಕ ಶಾಲಾ ತಂಡವನ್ನು ಮತ್ತು ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಶಾಲಾ ತಂಡವು ಬ್ರಹ್ಮಾವರದ ಎಸ್. ಎಂ.ಎಸ್. ಶಾಲಾ ತಂಡವನ್ನು ಪರಾಜಯ ಗೊಳಿಸಿ ಅಂತಿಮ ಹಂತವನ್ನು ಪ್ರವೇಶಿಸಿವೆ.
ಮಾಧವ ಕೃಪಾ ಶಾಲಾ ತಂಡವು ಮೊದಲು ಬ್ಯಾಟಿಂಗ್ ನಡೆಸಿ 28 ಓವರುಗಳಲ್ಲಿ 149 ರನ್‌ಗಳನ್ನು ಗಳಿಸಿದರೆ ಎದುರಾಳಿ ವಿದ್ಯಾವರ್ಧಕ ಶಿರ್ವ ತಂಡವು 138 ರನ್‌ಗಳನ್ನು ಮಾತ್ರ ಗಳಿಸುವ ಮೂಲಕ 11 ರನ್‌ಗಳ ಅಂತರದ ಸೋಲನ್ನು ಕಂಡಿತು.
ಎಸ್.ಎಂ.ಎಸ್ ಬ್ರಹ್ಮಾವರ ತಂಡವು ಮಾಧವ ಕೃಪಾ ತಂಡದ ಕರಾರುವಕ್ಕಾದ ಬೌಲಿಂಗಿನೆದುರು ರನ್ ಗಳಿಸಲು ಪರದಾಡಿ 105 ರನ್‌ಗಳ ಮೊತ್ತಕ್ಕೆ ಆಲೌಟಾದರೆ, ಶಾರದಾ ತಂಡವು ಸಮರ್ಥ್‌ರ ಅಜೇಯ 73 ರನ್‌ಗಳ ನೆರವಿನಿಂದ 16ನೇ ಓವರಿನಲ್ಲಿ ವಿಜಯದ ಗುರಿ ತಲುಪಿ 9ವಿಕೆಟ್‌ಗಳ ಅಂತರದ ಜಯ ಸಾಧಿಸಿತು.
ಅಂತಿಮ ಪಂದ್ಯವು ಡಿ.12ರ ರವಿವಾರ ಬ್ರಹ್ಮಾವರದ ಎಸ್.ಎಂ.ಎಸ್. ಕ್ರೀಡಾಂಗಣದಲ್ಲಿ ಜರಗಲಿದೆ.





