ರವಿಚಂದ್ರ ಹೊಸೂರುಗೆ ಪಿಎಚ್‌ಡಿ ಪದವಿ

ಉಡುಪಿ, ಡಿ.10: ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿರುವ ರವಿಚಂದ್ರ ಹೊಸೂರು ಇವರು ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಮಂಡಿಸಿದ ‘ರೋಲ್ ಅಪ್ ಬ್ಯಾಂಕ್ಸ್ ಇನ್ ರೂರಲ್ ಡೆವೆಲಪಮೆಂಟ್ - ಎ ಸ್ವಡಿ ಇನ್ ಉಡುಪಿ ಡಿಸ್ಟ್ರಿಕ್ಟ್’ ಎನ್ನುವ ಸಂಶೋಧನಾ ಮಹಾಪ್ರಬಂದಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ರೇಣುಕಾ ಕೆ. ಇವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದರು.
ರವಿಚಂದ್ರ, ವಂಡ್ಸೆ ಸಿಎ ಬ್ಯಾಂಕ್‌ನ ನಿದೇರ್ಶಕರಾದ ಬಿ.ರಾಮ ಹೊಸೂರು ಮತ್ತು ನಾಗಮ್ಮ ಇವರ ಪುತ್ರರಾಗಿದ್ದಾರೆ.
Next Story





