ಮಳೆ ಹಿನ್ನೆಲೆ; ಜೆಡಿಎಸ್ ಪಂಚರತ್ನ ರಥಯಾತ್ರೆ ಮುಂದೂಡಿಕೆ

ಬೆಂಗಳೂರು, ಡಿ. 10: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಆರಂಭವಾಗಬೇಕಿದ್ದ ಜೆಡಿಎಸ್ ‘ಪಂಚರತ್ನ ರಥಯಾತ್ರೆ’ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಯಾತ್ರೆ ಮುಂದೂಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಡಿ.15ರಂದು ಮಾಗಡಿಯಿಂದ ಪುನರ್ ಆರಂಭವಾಗಲಿರುವ ಯಾತ್ರೆ, 16ಕ್ಕೆ ರಾಮನಗರ, 17ಕ್ಕೆ ಹಾರೋಹಳ್ಳಿ, 18ಕ್ಕೆ ಕನಕಪುರ, 19ಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ಡಿ.27ರಂದು ಮತ್ತೆ ತುಮಕೂರು ಜಿಲ್ಲೆ ತುರುವೇಕೆರೆ, 28ಕ್ಕೆ ಚಿಕ್ಕನಾಯಕನಹಳ್ಳಿ, 29ಕ್ಕೆ ತುಮಕೂರು ಗ್ರಾಮಾಂತರ, ಡಿ.30ಕ್ಕೆ ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 10, 2022
ಪರಿಷ್ಕೃತ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ನೀಡಲಾಗಿದೆ.2/2#ಪಂಚರತ್ನ_ರಥಯಾತ್ರೆ pic.twitter.com/hX6vqCpFHb