ಪತ್ನಿ ಬಿಟ್ಟ ಚಿಂತೆಯಲ್ಲಿ ಪತಿ ಆತ್ಮಹತ್ಯೆ

ಬ್ರಹ್ಮಾವರ, ಡಿ.10: ಪತ್ನಿ ಬಿಟ್ಟ ಚಿಂತೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಡಿ.9ರಂದು ಮಧ್ಯಾಹ್ನ ವೇಳೆ ಬ್ರಹ್ಮಾವರ ಸಮೀಪದ ಮಟಪಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಮಟಪಾಡಿ ಗ್ರಾಮದ ಗೋಪಾಲಕೃಷ್ಣ ನಾಯರಿ(52) ಎಂದು ಗುರುತಿಸಲಾಗಿದೆ. 10-12ವರ್ಷಗಳ ಹಿಂದೆ ಹೆಂಡತಿಯನ್ನು ಬಿಟ್ಟ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೆ ಒಬ್ಬರೇ ಇದ್ದರು. ಇದೇ ಚಿಂತೆಯಲ್ಲಿ ಇವರು ಮನೆಯ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





