ಮಂಗಳಾ ರಿಸೋರ್ಸ್ ಮ್ಯಾ. ಸಂಸ್ಥೆಗೆ ಅಮೆರಿಕ ಮೂಲದ ಸಂಸ್ಥೆ ಸದಸ್ಯರ ಭೇಟಿ

ಮಂಗಳೂರು, ಡಿ.10: ಮರುಬಳಕೆಗೊಳ್ಳದ ತ್ಯಾಜ್ಯಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಅಮೇರಿಕ ಮೂಲದ ರಿ ಪರ್ಪಸ್ ಗ್ಲೋಬಲ್ ಸಂಸ್ಥೆಯು ಮಂಗಳೂರಿನ ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ಸಹಭಾಗಿತ್ವದೊಂದಿಗೆ ಮಹತ್ತರ ಯೋಜನೆಗಳನ್ನು ಕೈಗೊಂಡಿದೆ.
ಈ ನಿಟ್ಟಿನಲ್ಲಿ ರಿ ಪರ್ಪಸ್‌ಗ್ಲೋಬಲ್ ಸಂಸ್ಥೆಯ ಸದಸ್ಯರುತ್ಯಾಜ್ಯ ನಿರ್ವಹಣೆಯ ಕುರಿತಂತೆ ಮಂಗಳ ರಿಸೋರ್ಸ್ ಮೆನೇಜಮೆಂಟ್ ಸಂಸ್ಥೆಗೆ ಮೂರುದಿನಗಳ ಅಧ್ಯಯನ ಭೇಟಿಯನ್ನು ನೀಡಿದರು.
ತ್ಯಾಜ್ಯ ನಿರ್ವಹಣೆ ಎಂಬುದು ಮಹಾನಗರಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಈ ದಿನಗಳಲ್ಲಿ, ಮಂಗಳಾ ರಿಸೋರ್ಸ್ ಮೆನೇಜಮೆಂಟ್‌ತನ್ನ ವಿನೂತನ ಯೋಜನೆಗಳ ಮೂಲಕ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರಕೊಡುತಿದೆ. ಈ ಯಶೋಗಾಥೆಯನ್ನು ಪರಿಗಣಿಸಿ ರಿ ಪರ್ಪಸ್‌ಗ್ಲೋಬಲ್ ಸಂಸ್ಥೆಯು ಮರುಬಳಕೆ ಗೊಳ್ಳದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮಂಗಳ ನಿರ್ವಹಣಾ ಸಂಸ್ಥೆಯೊಂದಿಗೆ ಮಹತ್ವದಒಪ್ಪಂದ ಮಾಡಿಕೊಂಡಿದೆ.
ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ವೈಜ್ಞಾನಿಕತ್ಯಾಜ್ಯ ನಿರ್ವಹಣಾ ಯೋಜನೆಗಳನ್ನು ಅಧ್ಯಯನ ನಡೆಸಿದ ಅಮೇರಿಕ ಮೂಲದ ಸಂಸ್ಥೆ ವಿಶೇಷ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಅಂತರ್ಗತ ಮಲ್ಟಿ ಲೇಯರ್ ಪ್ಲಾಸ್ಟಿಕ್ ಗಳ ನಿರ್ವಹಣೆಗಾಗಿ ಪ್ಲಾಸ್ಟಿಕ್ ಕ್ರೆಡಿಟ್‌ಗಳನ್ನು ನೀಡುತ್ತದೆ. ರಿ ಪರ್ಪಸ್ ಗ್ಲೋಬಲ್ ಇತ್ತಿಚೆಗೆ ನಡೆಸಿದ ಎಕ್ಸ್ಟರ್ನಲ್‌ಆಡಿಟ್ ನಲ್ಲಿ, ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ. ಸಂಸ್ಥೆಯ ಸಮಗ್ರ ಯೋಜನೆಗಳಿಗೆ ಶೇ. 93 ಅಂಕಗಳನ್ನು ನೀಡಿ ಪ್ರಮಾಣೀಕರಿಸಿದೆ.
ನಮ್ಮ ಸಂಸ್ಥೆ ಮತ್ತು ರಿಪರ್ಪಸ್ ಗ್ಲೋಬಲ್ ಜೊತೆಗಿನ ಒಡಂಬಡಿಕೆ ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಕ್ರೆಡಿಟ್‌ಎಕ್ಸ್‌ಜೇಂಜ್ ಕ್ರಾಂತಿ ಮಾಡಲಿದೆ ಮಂಗಳಾ ರಿಸೋರ್ಸ್ ಮೆನೇಜಮೆಂಟ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ದಿಲ್ ರಾಜ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.