ತೈವಾನ್‍ನಿಂದ ಮದ್ಯ ಆಮದು ಸ್ಥಗಿತಗೊಳಿಸಿದ ಚೀನಾ

ತೈಪೆ, ಡಿ.10: ತೈವಾನ್‍ನಿಂದ ಕೆಲವು ಮದ್ಯಸಾರಯುಕ್ತ ಪಾನೀಯಗಳ ಆಮದನ್ನು ಚೀನಾ ಸ್ಥಗಿತಗೊಳಿಸಿದೆ ಎಂದು ತೈವಾನ್‍ನ ಸರಕಾರಿ ಸ್ವಾಮ್ಯದ `ಸೆಂಟ್ರಲ್ ನ್ಯೂಸ್ ಏಜೆನ್ಸಿ' (Central News Agency)ವರದಿ ಮಾಡಿದೆ.
ತೈವಾನ್‍ನಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಸರಕಾರ ಅಮೆರಿಕ ಮತ್ತದರ ಮಿತ್ರದೇಶಗಳೊಂದಿಗೆ ಸ್ನೇಹ ಸಂಬಂಧ ಹೆಚ್ಚಿಸುತ್ತಿರುವುದರಿಂದ ಕೆರಳಿರುವ ಚೀನಾ, ತೈವಾನ್‍ನಿಂದ ಮೀನು, ಹಣ್ಣುಗಳ ಆಮದು ಪ್ರಕ್ರಿಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿದೆ. ಇದೀಗ ಮದ್ಯಸಾರದ ಆಮದನ್ನೂ ಸ್ಥಗಿತಗೊಳಿಸುವ ಮೂಲಕ ತೈವಾನ್‍ಗೆ `ಶಿಕ್ಷೆ' ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





