ಇರಾನ್: ಖಾಮಿನೈ ಸೊಸೆಗೆ 3 ವರ್ಷ ಜೈಲುಶಿಕ್ಷೆ

ಟೆಹ್ರಾನ್, ಡಿ.10: ಇರಾನ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿದ ಕಾರಣಕ್ಕೆ ಸರ್ವೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ(Ayatollah Ali Khamenei)ಯ ಸೊಸೆ ಫರೀದಾ ಮೊರಾದ್‍ಖಾನಿ(Farida Moradkhani)ಗೆ 3 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‍ನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದ ಫರೀದಾರನ್ನು ನವೆಂಬರ್‍ನಲ್ಲಿ ಇರಾನ್ ಆಡಳಿತ ಬಂಧಿಸಿತ್ತು. ಫರೀದಾ ಈ ಹಿಂದಿನಿಂದಲೂ ಇರಾನ್ ಆಡಳಿತವನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದರು. ಅಲ್ಲದೆ, ಇರಾನ್‍ನೊಂದಿಗೆ ಅಂತರಾಷ್ಟ್ರೀಯ ಸಮುದಾಯ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ಆಗ್ರಹಿಸಿದ್ದರು.
ಫರೀದಾಗೆ ಇರಾನ್‍ನ ವಿಶೇಷ ನ್ಯಾಯಾಲಯ 15 ವರ್ಷದ ಜೈಲುಶಿಕ್ಷೆ ವಿಧಿಸಿತ್ತು. ಆದರೆ ಬಳಿಕ ಮೇಲ್ಮನವಿಯನ್ನು ಪರಿಗಣಿಸಿ ಶಿಕ್ಷೆಯನ್ನು 3 ವರ್ಷಕ್ಕೆ ಇಳಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
Next Story