ಒಡೆಸಾ ನಗರದ ಮೇಲೆ ರಶ್ಯ ಡ್ರೋನ್ ದಾಳಿ

ಕೀವ್, ಡಿ.10: ಉಕ್ರೇನ್(Ukraine)ನ ಆಯಕಟ್ಟಿನ ಬಂದರು ನಗರ ಒಡೆಸಾದ ಮೇಲೆ ಶುಕ್ರವಾರ ರಾತ್ರಿ ರಶ್ಯ ನಡೆಸಿದ ಡ್ರೋನ್ ದಾಳಿ(Drone attack )ಯಿಂದ ನಗರದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಆದರೆ ಕೆಲವು ನಿರ್ಣಾಯಕ ಮೂಲಸೌಕರ್ಯಗಳಾದ ಆಸ್ಪತ್ರೆ, ಇತ್ಯಾದಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಸ್ಥಾಪಿಸಲಾಗಿದೆ. ಉಳಿದ ಪ್ರದೇಶಗಳು ಕಗ್ಗತ್ತಲಲ್ಲಿ ಮುಳುಗಿದೆ. ಪರಿಸ್ಥಿತಿ ಕಠಿಣವಾಗಿದೆ, ಆದರೂ ನಿಯಂತ್ರಣದಲ್ಲಿದೆ ಎಂದು ಈ ಪ್ರದೇಶದ ಉಪ ನಿರ್ವಹಣಾಧಿಕಾರಿ ಕಿರಿಲೊ ಟಿಮೊಶೆಂಕೊ ಹೇಳಿದ್ದಾರೆ.
ಉಕ್ರೇನ್‍ನ ವಾಯು ರಕ್ಷಣಾ ವ್ಯವಸ್ಥೆಯು ರಶ್ಯದ 2 ಡ್ರೋನ್‍ಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
Next Story