ಜೊತೆಯಾಗಿ ಉಮ್ರಾ ನಿರ್ವಹಿಸಿದ ಮೈಕ್ ಟೈಸನ್, ಡಿಜೆ ಖಾಲಿದ್

ದುಬೈ: ಖ್ಯಾತ ಡಿಜೆ ಹಾಗೂ ರೆಕಾರ್ಡ್ ಪ್ರೊಡ್ಯೂಸರ್ ಡಿಜೆ ಖಾಲಿದ್ ಅವರು ಮಾಜಿ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗೆ ಸೌದಿ ಅರೇಬಿಯಾದ ಮಕ್ಕಾ ನಗರದಲ್ಲಿರುವ ವೀಡಿಯೊವನ್ನು ಶುಕ್ರವಾರ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಖಾಲಿದ್ ಮತ್ತು ಟೈಸನ್ ಪವಿತ್ರ ಕಾಬಾದ ಮುಂದೆ ಪ್ರಾರ್ಥನೆ ಮಾಡುತ್ತಿರುವುದು ಮತ್ತು ಉಮ್ರಾ ಮಾಡುವುದು ವೀಡಿಯೊದಲ್ಲಿ ಕಾಣಬಹುದು. ಮಾಜಿ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಅವರು 1992 ರಲ್ಲಿ ಜೈಲಿನಲ್ಲಿದ್ದ ಸಮಯದಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದರು ಎಂದು ವರದಿಯಾಗಿದೆ.
“ನಾನು [ಮಕ್ಕಾ]ಕ್ಕೆ ಕಾಲಿಟ್ಟ ಮರುಕ್ಷಣವೇ ನನ್ನ ಕಣ್ಣಲ್ಲಿ ನೀರು ಬಂತು. ನನ್ನ ಇಡೀ ಜೀವನದ ಸಂತೋಷದ ಕಣ್ಣೀರು. ನಾನು ಪ್ರಾರ್ಥನೆ ಮಾಡಲು ಮತ್ತು ಅಲ್ಲಾಹನಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು [ಮಕ್ಕಾ] ಗೆ ಹೋಗಲು ಬಯಸಿದ್ದೆ" ಎಂದು ಖಾಲಿದ್ ಬರೆದಿದ್ದಾರೆ.
Next Story