ಮೂಡುಬಿದಿರೆ; ಡಿ.21ರಿಂದ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಮೇಳ
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿ

ಮೂಡಬಿದಿರೆ (ವಿದ್ಯಾಗಿರಿ), ಡಿ.10; ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣ ಸೇರಿದಂತೆ ಸುಮಾರು 150 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮಾವೇಶ ಜಂಬೂರಿ ಡಿ.21ರಿಂದ 27ರವರೆಗೆ ನಡೆಯಲಿದೆ.
100 ವರ್ಷಗಳ ಇತಿಹಾಸ ದಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ನಡೆಯುವ ಈ ಐತಿಹಾಸಿಕ ಸಮಾವೇಶದಲ್ಲಿ ಈಗಾಗಲೇ 10ದೇಶಗಳ ಪ್ರತಿನಿಧಿಗಳು ಸೇರಿ 50,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ಜಂಬೂರಿ ಸಮಾವೇಶವನ್ನು ಸಂಸದರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರ ನೇತೃತ್ವದಲ್ಲಿ ಉದ್ಘಾಟಿ ಸಲಿದ್ದಾರೆ ಎಂದು ಮೋಹನ್ ಆಳ್ವ ಸಿದ್ಧತೆಯ ಬಗ್ಗೆ ವಿವರಿಸಿದರು.
ಈ ಹಿಂದೆ ಕರ್ನಾಟಕ ದಲ್ಲಿ ರಾಷ್ಟ್ರೀಯ ಮಟ್ಟದ 3ಸಮ್ಮೇಳನ ನಡೆದಿದೆ. ಆದರೆ ಅಂತಾರಾಷ್ಟ್ರೀಯ ಸಮ್ಮೇಳನ ಪ್ರಥಮ ಬಾರಿಗೆ ಮೂಡಬಿದಿರೆಯಲ್ಲಿ ನಡೆಯುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ನ 100ನೆ ವರ್ಷಾ ಚರಣೆ ಸಂದರ್ಭದಲ್ಲಿ ಈ ಸಮಾವೇಶ ನಡೆಯುತ್ತಿದೆ. ಸುಮಾರು 35 ಕೋಟಿ ರೂ ವೆಚ್ಚದಲ್ಲಿ ನಡೆಯುವ ಈ ಸಮಾವೇಶಕ್ಕೆ ರಾಜ್ಯ ಸರಕಾರ ಸುಮಾರು 10 ಕೋಟಿ ರೂ ಬಿಡುಗಡೆ ಮಾಡುವ ಆದೇಶ ನೀಡಿದೆ. ಇನ್ನಷ್ಟು ಧನ ಸಹಾಯದ ಅಗತ್ಯವಿದೆ. ಸರಕಾರದ ಜೊತೆ ಹೊರೆ ಕಾಣಿಕೆಯೊಂದಿಗೆ ಸಾರ್ವಜನಿಕರ ಸಹಕಾರದ ನಿರೀಕ್ಷೆ ಇದೆ ಎಂದು ಮೋಹನ್ ಆಳ್ವ ತಿಳಿಸಿದ್ದಾರೆ.







