ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಮೃತ್ಯು
![ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಮೃತ್ಯು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಮೃತ್ಯು](https://www.varthabharati.in/sites/default/files/images/articles/2022/12/11/359699-1670754118.jpg)
ಬೆಂಗಳೂರು,ಡಿ.11: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕಾರು ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ರವಿಕುಮಾರ್.ಎಸ್.ಕಾಳೆ ಮೃತ ಚಾಲಕ ಎಂದು ತಿಳಿದು ಬಂದಿದೆ.
ರಾತ್ರಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರ ಬರುವಿಕೆಗಾಗಿ ಕಾಯುತ್ತಿರುವ ಸಂದರ್ಭ ವಿಮಾನ ನಿಲ್ದಾಣದ VVIP ಲಾಂಜ್ ಬಳಿ ರವಿಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಲಾಂಚ್ ಬಳಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಧ್ಯರಾತ್ರಿ 2:20ರ ಸುಮಾರಿಗೆ ರವಿಕುಮಾರ್ ಕಾಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ರಾಜ್ಯಪಾಲರು ಹೆಚ್ಚುವರಿ ವಾಹನ ಬಳಸಿಕೊಂಡು ರಾಜ್ಯಭವನಕ್ಕೆ ತೆರಳಿದ್ದಾರೆ.
Next Story