Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. VIDEO- ಬಿಜೆಪಿಗೆ ಮತ ಹಾಕಿ ಎಂದು...

VIDEO- ಬಿಜೆಪಿಗೆ ಮತ ಹಾಕಿ ಎಂದು ಮುಸಲ್ಮಾನರಿಗೆ ಬೆದರಿಕೆ ಹಾಕಿದ ಶಾಸಕ ಪ್ರೀತಂ ಗೌಡ?

11 Dec 2022 7:15 PM IST
share
VIDEO- ಬಿಜೆಪಿಗೆ ಮತ ಹಾಕಿ ಎಂದು ಮುಸಲ್ಮಾನರಿಗೆ ಬೆದರಿಕೆ ಹಾಕಿದ ಶಾಸಕ ಪ್ರೀತಂ ಗೌಡ?

ಹಾಸನ, ಡಿ.11: 'ಯಾರು ಕೆಲಸ ಮಾಡುತ್ತಾರೋ ಅವರಿಗೆ ವೋಟು ಹಾಕಲೇಬೇಕು. ಬಾಯಲ್ಲಿ ಅಣ್ಣಾ ಅಂತ ಕರೆದು ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಎಂದರೆ ಕೆಲಸ ಮಾಡುವವರಿಗೆ ಕೋಪ ಬರುತ್ತದೆ' ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿ, ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗಿದೆ. 

ನಗರದ ಶ್ರೀನಗರ ಬಡಾವಣೆಯಲ್ಲಿ ರಾತ್ರಿ ವೇಳೆ ಕಗ್ಗತ್ತಲಲ್ಲಿ ನಿಂತು ಶಾಸಕ ಪ್ರೀತಂಗೌಡ ಅವರು ನನಗೆ ಮತ ಹಾಕುಲೇ ಬೇಕು ಎಂದು ನೇರವಾಗೇ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ವಿಡಿಯೋದಲ್ಲಿ ಶಾಸಕರ ಮುಖ ಕಾಣಿಸುವುದಿಲ್ಲ. ಈ ವೈರಲ್ ವಿಡಿಯೋ ಶಾಸಕ ಪ್ರೀತಂಗೌಡ ಅವರದ್ದೇ ಎಂದು ಸ್ಥಳೀಯರು ಖಚಿತಪಡಿಸಿದ್ದಾರೆ. 

ವಿಡಿಯೋದಲ್ಲಿ ಏನಿದೆ? :  

ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಓಟು ಹಾಕಲ್ಲ ಅಂತ ಹೇಳಿದ್ರೆ ಕೆಲಸ ಮಾಡಿರೋರಿಗೆ ಉರಿ ಹತ್ತಲ್ವಾ, ನೀವು ಬೆಳಿಗ್ಗೆಯಿಂದಲೂ ಕೂಲಿ ಹೋಗೋರುವರು ಅಂತಿರಾ, ಸಂಜೆ ಕೂಲಿ ಕೊಡದೇ ಹೋದ್ರೆ ಬಿಡ್ತಿರಾ, ಏನವ್ವಾ ನೀನು, ದುಡ್ಡು ಕೊಡು ಅಂತಿಯಾ, ನಾನು ಇಲ್ಲಿ ಕೆಲಸ ಮಾಡಿರ್ತಿನಿ, ಕೂಲಿ ಮಾಡಿರ್ತಿನಿ ಆಗೆ ಓಟು ಕೇಳ್ತಿನಿ. ನಾನು ಬಿಡಿಸಿ ಹೇಳ್ತಾ ಇದ್ದೀನಿ ಚಿಕ್ಕ ಮಕ್ಕಳಿಗೂ ಅರ್ಥ ಆಗ್ಲಿ ಅಂತಾ, ಇಲ್ಲಿ ಇರೋಲೆಲ್ಲರೂ ದೊಡ್ಡವರು ಓಟು ಹಾಕವ್ರು ಎಂದು ನಾನು ಮನಸ್ಸು ಪೂರ್ವಕವಾಗಿ ಹೇಳ್ತಿದಿನಿ, ನಮ್ಮ ಮುಸಲ್ಮಾನ್ ಸಹೋದರರನ್ನ ನಮ್ಮ ಸಹೋದರರ ರೀತಿಯಲ್ಲಿ​ ಪ್ರಮಾಣಿಕವಾಗಿ ಪ್ರಿತಿಯಿಂದ ಕಾಣ್ತಿದಿನಿ, ಮುಂದೇನು ಕಾಣ್ತೀನಿ. ಆದರೆ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ನೀವೇನಾದ್ರು ಸಹಾಯ ಮಾಡ್ಲಿಲಾ ಅಂದ್ರೆ. ಇವರಿಗೆ ಎಷ್ಟು ಕೆಲಸ ಮಾಡಿದ್ರೆ ಇಷ್ಟೇ ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಅನ್ನುವ ತೀರ್ಮಾನಕ್ಕೆ ಬರ್ತಿನಿ. ಆ ತೀರ್ಮಾನಕ್ಕೆ ಬರದೇ ಇರುವ ರೀತಿ ನೋಡ್ಕಳ್ಲೋದು ನಿಮ್ಮ ಜವಾಬ್ದಾರಿ.

​ಮೂರು ಸಾರಿ ನನಗೆ ಕೈಕೊಟ್ಟಿದೀರಿ, ನನ್ನ ಎಂಎಲ್ಎ ಚುನಾವಣೆಯಲ್ಲಿ ಓಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ಓಟು ಹಾಕಿಲ್ಲ, ಎಂಪಿ ಚುನಾವಣೆಯಲ್ಲಿ ಓಟು ಹಾಕಿಲ್ಲ. ಈಗ ಮತ್ತೆ ಐದು ವರ್ಷ ಆದ್ಮೇಲೆ ನನ್ನ ಚುನಾವಣೆ ಬರುತ್ತೆ. ಆ ಸಂದರ್ಭದಲ್ಲಿ ನೀವೇನಾದ್ರು ಕೈಕೊಟ್ರೆ ನಾನು ಕೈ, ಕಾಲು ಕೊಡ್ತಿನಿ, ಏಟಿಗೆ ಸಿಗೋದಿಲ್ಲ ಅರ್ಥ ಆಗ್ತಿದಿಯಾ ,ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಸ್ತಿನಿ, ಯಾವ ಕೆಲಸವನ್ನು ಮಾಡಿಕೊಡೋದಿಲ್ಲ ನೇರವಾಗಿ ಹೇಳ್ತಿದಿನಿ.

ರಸ್ತೆ, ಚರಂಡಿ, ನೀರು ಕೊಡ್ತಿನಿ ನನ್ನ ಧರ್ಮ ಅದು, ಒಬ್ಬ ಶಾಸಕನಾಗಿ ಮಾಡಬೇಕು ಮಾಡ್ತಿನಿ. ಇನ್ನು ಉಳಿದಂತ ಯಾವುದೇ ಕೆಲಸ ವೈಯಕ್ತಿಕವಾಗಿ ಮಾಡಲು ಆಗಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲಾ. ಇವತ್ತೇ ನೀವೆಲ್ಲಾ ಸೇರಿ ತೀರ್ಮಾನ ಮಾಡಿಕೊಳ್ಳಿ ಎಂದರು.

​ಶಾಸಕರಿಗೆ ಒಂದೂವರೆ ಸಾವಿರ ಓಟು ಕೊಡ್ತಿನಿ ಅಂದರೆ ಇಲ್ಲಿಂದ ಹೊರಡುತ್ತೀನಿ, ಇಲ್ಲಾ ಹತ್ತು ನಿಮಿಷ ಚರ್ಚೆ ಮಾಡಿಕೊಳ್ಳಿ. ಯಾರೋ ದಳದವರು, ಕಾಂಗ್ರೆಸ್ ನವರು ಬರ್ತಾರೆ ಅಂತ, ಅವರು ಬಂದಾಗಲೆಲ್ಲಾ ಅವರ ಹಿಂದೆ ಸುಮ್ಮನೆ ಬಂದಿದ್ವಿ, ಮೆರವಣಿಗೆ ಹೋದ್ವಿ, ಸುಮ್ನೆ ಅವರ ಹಿಂದೆ ಹೋಗಿ ಓಟು ಕೇಳ್ಕಂಡು ಬಂದ್ವಿ ಅಂತ ಹೇಳ್ಬಿಟ್ರೆ. ನನಗೂ ಜನ ಇರ್ತಾರೆ ಇಲ್ಲಿ ಇರುವಂತಹವರು, ಅವರಿಗೆ ಮಾಡ್ಬೇಡಿ ನಾನು ಇದೆಲ್ಲಾ ಮಾಡಿಕೊಡ್ತಿನಿ ಅಂತಾರೆ.

ಮಾಡಿಕೊಡುತ್ತೇನೆ ಅಂತ ಹೇಳುವವರ ಮನೆಯಲ್ಲಿ ಮೂರು ಸಾರಿ ಮುಖ್ಯಮಂತ್ರಿ ಆಗಿದ್ರು. ದೊಡ್ಡಗೌಡ್ರು ಒಂದು ಸಾರಿ, ಕುಮಾರಣ್ಣ ಎರಡು ಸಾರಿ ಮುಖ್ಯಮಂತ್ರಿ ಆಗಿದ್ರು, ರೇವಣ್ಣ ಅವರು ನಾಲ್ಕು ಸಾರಿ ಮಂತ್ರಿಯಾಗಿದ್ರು. ಯಾವತ್ತಾದ್ರೂ ಶ್ರೀನಗರಕ್ಕೆ ಬಂದವ್ರಾ?, ನೋಡಿದಿರಾ ಅವರ ಮುಖನಾ?. ಈಗ ಬರ್ತಾರೆ, ರೆಡಿಯಾಗಿ ಬಂದಾಗ ಏನ್ ಹೇಳ್ಬೇಕು ಅದನ್ನು ಹೇಳಲು ಯೋಚನೆ ಮಾಡ್ಕಂಡಿರಿ, ಅರ್ಥ ಆಗ್ತದಿಯಾ ನಾನು ಹೇಳ್ತಿರೋದು. ನಾನು ಎಂಎಲ್ಎ ಆಗಿ ಆಗಿರೋದು ನಾಲ್ಕು ವರ್ಷ. ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾನೂ ರೆಡಿ ಮಾಡಿದ್ದೀನಿ. ಯುಜಿಡಿ ಮಾಡಬೇಕು ಬೇಡವೋ ಅಂತ ಕೇಳಕ್ಕೆ ಬಂದಿದ್ದೀನಿ. ಓಟು ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ ಅಂತ ನೇರವಾಗಿ ಹೇಳಿದ ಶಾಸಕ ಪ್ರೀತಂಗೌಡ ಅವರು, ಅವರು ಬರೋದು ನಾನು ಮಾಡ್ತೀನಿ ಅಂತ. ಇಲ್ಲಿ ತನಕ ಏನ್ ಮಾಡ್ತಿದ್ರು ಪ್ರಧಾನಮಂತ್ರಿ ಆಗಿದ್ದವರು, ಮೂರು ಸಾರಿ ಮುಖ್ಯಮಂತ್ರಿ ಆಗಿದ್ದವರು, ನಾಲ್ಕು ಭಾರಿ ಮಂತ್ರಿಯಾಗಿದ್ದವರು ಈಗ ಚುನಾವಣೆ ಬಂದಂತಹ ಸಂದರ್ಭದಲ್ಲಿ, ಅವರು ಬಂದಾಗ ಅದು ಮಾಡಿ ಕೊಡ್ತಾರೆ, ಇದು ಮಾಡಿ ಕೊಡ್ತಾರೆ ಅಂತಾರೆ, ಅವರಿಗೆ ಯಾವ ಅಧಿಕಾರನೂ ಇಲ್ಲಾ. ಶಾಸಕ ನಾನು, ಮುನ್ಸಿಪಾಲಿಟಿ ಅಧ್ಯಕ್ಷ ಮೋಹನಣ್ಣ, ಮುಖ್ಯಮಂತ್ರಿ ಬೊಮ್ಮಯಿ ಅವರು, ಪ್ರಧಾನಮಂತ್ರಿ ನರೇಂದ್ರಮೋದಿಯವರು ಎಂದು ಪರೋಕ್ಷವಾಗಿ ಶಾಸಕ ಪ್ರೀತಂಗೌಡ ಅವರು ಬೆದರಿಕೆ ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸದ್ಯ ವೈರಲ್ ಆಗುತ್ತಿದ್ದು, ಶಾಸಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

share
Next Story
X