Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ12 Dec 2022 12:05 AM IST
share
ಓ ಮೆಣಸೇ...

ತಾಕತ್ತಿದ್ದರೆ ಸಿದ್ದರಾಮಯ್ಯ ನನ್ನ ಮುಂದೆ ಗೋಮಾಂಸ ತಿನ್ನಲಿ- ಪ್ರಭು ಚೌವ್ಹಾಣ್, ಸಚಿವ
ನಿಮ್ಮ ನರಭಕ್ಷಕ ಪಾಳಯದಲ್ಲಿ ಗುಟ್ಟಾಗಿ ಗೋಮಾಂಸ ತಿನ್ನುವವರಿಗೆ ಇಂತಹ ಸವಾಲು ಹಾಕಿ.

ನೂರಾರು ಜನ ಬಿಜೆಪಿಗೆ ಬರುತ್ತಾರೆ ಅವರ ಜಾತಕ, ಕುಂಡಲಿ ನೋಡಿ ಬಿಜೆಪಿಗೆ ಸೇರಿಸಿಕೊಳ್ಳಲು ಆಗುತ್ತದೆಯೇ?- ಪ್ರತಾಪ ಸಿಂಹ, ಸಂಸದ
ಗುಣ ನೋಡಿ ಪಕ್ಷಕ್ಕೆ ಸೇರಿಸುವ ಸಂಸ್ಕಾರ ನಿಮ್ಮ ಪಕ್ಷದಲ್ಲಿ ಇದ್ದಿದ್ದರೆ ನೀವು ಎಲ್ಲಿರುತ್ತಿದ್ದಿರಿ?

ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟ್‌ನಲ್ಲಿತ್ತು- ಸಿ.ಟಿ.ರವಿ, ಶಾಸಕ
ರಾಜಕೀಯ ಪ್ರಭಾವ ಬಳಸಿ ಪಟ್ಟಿಯಿಂದ ಹೆಸರು ತೆಗೆಸಿ ನಿರಾತಂಕವಾಗಿ ರೌಡಿ ಸಂಸ್ಕೃತಿಯನ್ನು ಮುಂದುವರಿಸುತ್ತಿದ್ದೀರಾ?

ನಮ್ಮ ದೇಶವನ್ನು ಕೆಣಕಲು ಬಂದರೆ ಸುಮ್ಮನೆ ಬಿಡುವುದಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಕೆಣಕುವವರು ಹಿಮಾಚಲ ಪ್ರದೇಶವನ್ನು ಆವರಿಸಿದ್ದಾಗಿದೆ. ಇನ್ನೇನು ಅವರು ದಿಲ್ಲಿಗೆ ಬಂದು ಕೆಣಕಬೇಕೆನ್ನುತ್ತೀರಾ?

ಕರ್ನಾಟಕದಲ್ಲಿ ಸಹೋದರರಂತೆ ಬಾಳುವ ಕನ್ನಡಿಗರು-ಮರಾಠಿಗರ ನಡುವೆ ಹುಳಿ ಹಿಂಡುವ ಕೆಲಸವನ್ನು ಮಹಾರಾಷ್ಟ್ರ ಸಚಿವರು ಮಾಡುತ್ತಿದ್ದಾರೆ- ಜಗದೀಶ್ ಶೆಟ್ಟರ್, ಮಾಜಿ ಸಚಿವ
ಹುಳಿ ಹಿಂಡುವುದು ನಿಮ್ಮ ಜನ್ಮ ಸಿದ್ಧ ಹಕ್ಕಾಗಿರುವಾಗ ಇತರರಿಗೆ ಆ ಉಸಾಬರಿ ಯಾಕೆ?

ದೇಶ ಭಕ್ತಿಯ ಶಿಕ್ಷಣಕ್ಕೆ ಆದ್ಯತೆ ದೊರೆಯಬೇಕು- ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಅದಕ್ಕೆ ಮೊದಲು ಸಂಘ ಭಕ್ತಿ, ಅಂಧ ಭಕ್ತಿ ಇತ್ಯಾದಿಯನ್ನು ತೊಲಗಿಸುವ ಶಿಕ್ಷಣ ತರಬೇಕು.

ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು- ಕಾಂಗ್ರೆಸ್
ಹಿಂದಿನ ರೌಡಿಗಳು ಇಂದು ರೌಡಿಗಳೂ ಹೌದು, ನಾಯಕರೂ ಹೌದು. ಅದು ಪಕ್ಷಾತೀತ ಸತ್ಯ.

ಗೋವನ್ನು ಮಾತೆ ಎಂದು ಪೂಜಿಸುವ ಬಿಜೆಪಿ ಗೋವಾದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಜಾರಿಗೊಳಿಸಿಲ್ಲ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಅಧಿಕಾರವೇ ದೇವರೆಂದ ಮೇಲೆ ಅದಕ್ಕಾಗಿ ತಂದೆ ತಾಯಿ ಇತ್ಯಾದಿ ಎಲ್ಲವನ್ನೂ ತ್ಯಾಗ ಮಾಡಲು ಸನ್ನದ್ಧರಾಗಿರಬೇಕಲ್ಲವೇ?

ಸುರತ್ಕಲ್ ಟೋಲ್‌ಗೇಟ್ ಹಿಂದಿನ ಸರಕಾರದ ಪಾಪದ ಕೂಸು- ಸನೀಲ್ ಕುಮಾರ್, ಸಚಿವ
ನಿಮ್ಮ ಸಿದ್ಧಾಂತದ ಅಸ್ತಿತ್ವಕ್ಕೂ ಈ ಮಾತು ಅನ್ವಯಿಸುತ್ತದೆ.

ಪಂಚಮಸಾಲಿ 3 ಪೀಠಗಳೂ ಒಂದೇ, ಎಲ್ಲರಿಗೂ ಮೀಸಲು ಸಿಗಲಿ- ಮುರುಗೇಶ್ ನಿರಾಣಿ, ಸಚಿವ
ವರ್ಣವ್ಯವಸ್ಥೆಯನ್ನು ಆಧರಿಸಿದ ಪರಂಪರಾಗತ ಮೀಸಲಾತಿಯನ್ನು ಕೊನೆಗೊಳಿಸಿಬಿಟ್ಟರೆ ಮತ್ತೆ ಯಾರಿಗೂ ಯಾವುದೇ ಸರಕಾರಿ ಮೀಸಲಾತಿಯ ಅಗತ್ಯವಿಲ್ಲ.

ಭಾರತೀಯ ಕ್ರಿಕೆಟ್ ಟೀಮ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು- ಚೇತನ್ ಅಹಿಂಸಾ, ನಟ
ಈಗಾಗಲೇ ಮೇಲ್ಜಾತಿಯವರಿಗೆ ಶೇ.50ಕ್ಕಿಂತ ಹೆಚ್ಚಿನ ಅನಧಿಕೃತ ಮೀಸಲಾತಿ ಇದೆಯಲ್ಲ ?

ಸಿದ್ದರಾಮಯ್ಯರನ್ನು ಸಿಎಂ ಮಾಡುತ್ತೇವೆ ಎಂದರೆ ಉಳಿದ ಆಕಾಂಕ್ಷಿಗಳಿಗೆ ನೋವಾಗಬಹುದು - ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ನಾಯಕ
ಯಾರಿಗೂ ನೋವಾಗಬಾರದೆಂದಾದರೆ ಕಾಂಗ್ರೆಸ್ ಚುನಾವಣಾ ರಾಜಕೀಯದಿಂದಲೇ ದೂರ ಉಳಿಯಬೇಕು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ವಿರೋಧಿಸುವವ ನಾನು ಮಾತ್ರ ಅನಿಸುತ್ತದೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ನೀವು ವಿರೋಧಿಸುತ್ತಿರುವ ತನಕ ಅಲ್ಲಿಯ ಜನತೆ, ಡಿಎಂಕೆ ಜನಪರ ಪಕ್ಷವೆಂದು ನಂಬಿಕೊಂಡಿರುತ್ತಾರೆ.

ಗೋಡೆ ಬರಹ ಬರೆಯುವವರು ಹೇಡಿಗಳು - ಕೆ.ಎಸ್.ಈಶ್ವರಪ್ಪ, ಶಾಸಕ
ಹತಾಶ ಗೊಣಗಾಟವೇ ಭಾಗ್ಯವೆಂದು ಹಣೆಬರಹ ಬರೆದವರ ಬಗ್ಗೆ ಏನಂತೀರಿ?

ನನ್ನ ರಾಜ್ಯದಲ್ಲಿ ಹೆಣ್ಣು ಮಕ್ಕಳನ್ನು 35 ತುಂಡುಗಳಾಗಿ ಕತ್ತರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ
ಈ ವರ್ಷದ ಮೊದಲ ಆರು ತಿಂಗಳಲ್ಲಿ ನಿಮ್ಮ ರಾಜ್ಯದಲ್ಲಿ ದಾಖಲಾಗಿರುವ 217 ಅತ್ಯಾಚಾರ ಪ್ರಕರಣಗಳನ್ನು ಕಂಡರೆ, ನೀವು ಕೇವಲ ತುಂಡರಿಸುವುದನ್ನು ಮಾತ್ರ ತಡೆದು ಬೇರೆಲ್ಲವನ್ನೂ ಪ್ರೋತ್ಸಾಹಿಸಿರುವಂತಿದೆಯಲ್ಲಾ?

ಬಿಜೆಪಿ ದೇಶ ಭಕ್ತರಿರುವ ಪಕ್ಷ - ರೇಣುಕಾಚಾರ್ಯ, ಶಾಸಕ
ದ್ವೇಷ ಭಕ್ತರು ಎಂದು ಸ್ಪಷ್ಟವಾಗಿ ಉಚ್ಚರಿಸಬಾರದೇ ?

ಚಾಮರಾಜಪೇಟೆಗೆ ನಾನು ಮಗ, ಸಿದ್ದರಾಮಯ್ಯ ಅಳಿಯ- ಝಮೀರ್ ಅಹ್ಮದ್, ಶಾಸಕ
ಅಂದರೆ ಅವರು ಅಲ್ಲಿಗೆ ಬಂದರೆ ಒಂದೇ ದಿನದಲ್ಲಿ ಮರಳಿ ಹೋಗಬೇಕೇ ?

ನಮ್ಮ ದೇಶ ಮಾದಕ ವಸ್ತು ಬಳಕೆದಾರ ದೇಶವಾಗಿ ಹೊರಹೊಮ್ಮುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕು- ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಕೋಮುವಾದದ ಅಮಲು ಹಂಚುವವರನ್ನು ಹದ್ದುಬಸ್ತಿನಲ್ಲಿಟ್ಟರೆ ಬೇರೆಲ್ಲ ಅಮಲು ವ್ಯಸನಗಳನ್ನು ಸುಲಭವಾಗಿ ಹತ್ತಿಕ್ಕಬಹುದು

ಪ್ರತೀ ಚುನಾವಣೆಯಲ್ಲೂ ಒಂದೊಂದು ಕ್ಷೇತ್ರಕ್ಕೆ ಹೋಗಲು ನಾನೇನು ಟೂರಿಂಗ್ ಟಾಕೀಸ್ ಅಲ್ಲ- ಕುಮಾರಸ್ವಾಮಿ, ಮಾಜಿ ಸಿಎಂ
ಜೆಡಿಎಸ್‌ನಲ್ಲೇ ಇದ್ದು ಬಿಜೆಪಿ ಜೊತೆ ಪಾಲುದಾರಿಕೆ ಮಾಡುವ ಹಳೆಯ ನೀತಿಯಲ್ಲೇ ಸ್ಥಿರವಾಗಿರುತ್ತೀರಾ?

ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಫಲಪ್ರದಗೊಳಿಸಲು ಸಾಮೂಹಿಕ ಪ್ರಯತ್ನ ಮಾಡಬೇಕು- ನರೇಂದ್ರ ಮೋದಿ, ಪ್ರಧಾನಿ
ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವ ಯೋಜನೆಗೇನಾಯಿತು?

ಕಳೆದ ಹತ್ತು ವರ್ಷಗಳಿಂದ 'ನರ-ಮಾನಸಿಕ' ರೋಗಿಗಳ ಸಂಖ್ಯೆ ತುಂಬಾ ಹೆಚ್ಚಿದೆ. - ಕೆ. ಸುಧಾಕರ್, ಸಚಿವ
ಹತ್ತಲ್ಲ, ಎಂಟು ವರ್ಷಗಳಿಂದ.

ಕಾಂಗ್ರೆಸ್ ಜನಸಂಖ್ಯೆ ನಿಯಂತ್ರಣ ಕಾಯ್ದೆ ತಂದಿದ್ದರೆ ನಾನು 4 ಮಕ್ಕಳ ತಂದೆಯಾಗುತ್ತಿರಲಿಲ್ಲ: ರವಿ ಕಿಶನ್, ಬಿಜೆಪಿ ಸಂಸದ
ಕಾಂಗ್ರೆಸ್‌ನವರು ನೆಹರೂ ಕಾಲದಲ್ಲೇ ಸಂತಾನ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದ್ದರೆ ನೀವೇ ಹುಟ್ಟಿರುತ್ತಿರಲಿಲ್ಲ.

ಟಿಕೆಟ್ ನೀಡುವ ವೇಳೆ ಹೊಸಬರಿಗೆ ಆದ್ಯತೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಾಗಾದರೆ ನಿಮಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೇ?

ಡಾ.ಅಂಬೇಡ್ಕರ್ ಪುತ್ಥಳಿ ಮೂಲಕ ಅವರ ಸತ್ಕರ್ಮಗಳನ್ನು ಅರಿತು ಅಳವಡಿಸಿಕೊಳ್ಳುವಂತಾಗಬೇಕು- ಥಾವರ್‌ಚಂದ್ ಗೆಹ್ಲೋಟ್, ರಾಜ್ಯಪಾಲ
ಅಂಬೇಡ್ಕರ್ ಬರೆದ ಪುಸ್ತಕಗಳ ಮೂಲಕ ಬೇಡವೇ?

ಜಮ್ಮು-ಕಾಶ್ಮೀರದ ಚುನಾವಣೆಯಲ್ಲಿ ಸರಕಾರ ಹಾಗೂ ಭದ್ರತಾ ಪಡೆಗಳು ಹಸ್ತಕ್ಷೇಪ ಮಾಡಬಾರದು - ಫಾರೂಕ್ ಅಬ್ದುಲ್ಲಾ, ಎನ್‌ಸಿ ಮುಖ್ಯಸ್ಥ
ಹಸ್ತಕ್ಷೇಪದ ಧೈರ್ಯದಿಂದಲೇ ಚುನಾವಣೆ ಘೋಷಿಸುತ್ತಾರೆ.

share
ಪಿ.ಎ. ರೈ
ಪಿ.ಎ. ರೈ
Next Story
X