ಕಾಂತಾರ ಸಿನೆಮಾದಿಂದ ತುಳುನಾಡ ವೈಶಿಷ್ಟ್ಯ ಜಗತ್ ಪ್ರಸಿದ್ಧ: ಸಚಿವ ಸುನಿಲ್ ಕುಮಾರ್
ಸಾಣೂರು ಜೋಡುಗರಡಿಗೆ ಶಿಲಾನ್ಯಾಸ

ಕಾರ್ಕಳ: ಹಿಂದೂ ಸಮಾಜದಲ್ಲಿ ದೈವ- ದೇವಸ್ಥಾನಗಳಿಗೆ ಬಲವಾದ ನಂಬಿಕೆಯಿದೆ. ಆರಾಧನೆ- ದೈವರಾಧನೆ ಪ್ರಸಿದ್ದಿ ಪಡೆದಿದೆ. ಕಾಂತಾರ ಚಲನಚಿತ್ರದ ಮೂಲಕ ತುಳುನಾಡ ವೈಶಿಷ್ಟ್ಯ ಜಗತ್ ಪ್ರಸಿದ್ಧವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ,ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡು ಗರಡಿ ಸಾಣೂರು ಇದರ ಗರಡಿಯ ಜೀರ್ಣೋದ್ಧಾರದ ಪ್ರಯುಕ್ತ ಧರ್ಮದೈವಗಳ ನೂತನ ಶಿಲಾಮಯ ಗರ್ಭಗುಡಿ ಮತ್ತು ರಾಜಗೋಪುರಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಮಹಾಲಿಂಗೇಶ್ವರ ದೇವಸ್ಥಾನ ದೇಂದಬೆಟ್ಟು ಸಾಣೂರು ಇದರ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀರಾಮ್ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್ , ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ,ಕ್ವಾರಿ ಅಸೋಸಿಯೇಷನ್ ನ ರಾಜ್ಯಧ್ಯಕ್ಷರಾದ ಬಜಗೋಳಿ ರವೀಂದ್ರ ಶೆಟ್ಟಿ, ಸಂದೀಪ್ ಶೆಟ್ಟಿ ಎಕ್ಕೂರು,ಬಿಲ್ಲವ ಸಂಘ ಕಾರ್ಕಳದ ಅಧ್ಯಕ್ಷರಾದ ಡಿ.ಆರ್ ರಾಜು,ರಮೇಶ್ ಶೆಟ್ಟಿ ಪಮ್ಮನಾಡಿ ಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಗದೀಶ್ ಪೂಜಾರಿ ಸಾಣೂರು, ನರಸಿಂಹ ಭಟ್ ಸಾಂತಿಂಜ, ನರಸಿಂಹ ಕಾಮತ್, ರತ್ನಾಕರ ಪೂಜಾರಿ, ಪ್ರವೀಣ್ ಕೋಟ್ಯಾನ್, ಪ್ರಭಾತ್ ನಾಯಕ್, ವಿಜಯ್ ಶೆಟ್ಟಿ, ದೇವಾನಂದ ಶೆಟ್ಟಿ, ಯುವರಾಜ್ ಜೈನ್, ಗಣೇಶ್ ಕಾಮತ್, ಸುಧಾಕರ್ ಡಿ. ಅಮೀನ್ ಪಾಂಗಾಳ, ಮತ್ತಿತರರು ಉಪಸ್ಥಿತರಿದ್ದರು. ಕರುಣಾಕರ ಎಸ್.ಕೋಟ್ಯಾನ್ ಸ್ವಾಗತಿಸಿ, ಸತೀಶ್ ಹೊಸ್ಮಾರು ನಿರೂಪಿಸಿದರು.